ಜೆಡಿಎಸ್ ಮುಖಂಡೆಯ (Jds Leader) ಪುತ್ರನ ಕಿರುಕುಳಕ್ಕೆ ಯುವತಿ ಆತ್ಮಹತ್ಯೆ (Crime) ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆಯಲ್ಲಿ ನಿರ್ಲಕ್ಷ್ಯ ವಹಿಸಿದ್ದಾರೆ ಎಂಬ ಆರೋಪದ ಮೇಲೆ ಕದ್ರಾ ಠಾಣೆ ಪಿಎಸ್‌ಐ ಸುನೀಲ್ ಎಂಬುವವರನ್ನು ಅಮಾನತು ( Police suspend) ಮಾಡಲಾಗಿದೆ.

ಜೆಡಿಎಸ್ ಮುಖಂಡೆಯ ಪುತ್ರನ ಚಿರಾಗ್ ಎಂಬಾತನನ್ನು ಬಂಧಿಸುವಲ್ಲಿ ವಿಳಂಬ ಮಾಡಿದ್ದಾರೆ ಎಂದು ಆರೋಪಿಸಿ ಪೊಲೀಸ್ ಇಲಾಖೆ ನೇರವಾಗಿ ಪಿಎಸ್‌ಐ ಸುನೀಲ್ ಎಂಬುವವರು ಕರ್ತವ್ಯದಿಂದ ಅಮಾನತುಮಾಡಲಾಗಿದೆ.

ಇತ್ತೀಚೆಗಷ್ಟೇ ರೀನಾ ಹಾಗೂ ಕ್ರಿಸ್ತೋದ್ ಡಿಸೋಜಾ ಪುತ್ರಿ ರಿಶೇಲ್ ಡಿಸೋಜಾ‌ ಎಂಬುವವರು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ದುರು ದಾಖಲಾದ ಮರುದಿನವೇ CPI ಗೆ ಕೇಸ್ ಹಸ್ತಾಂತರವಾಗಿತ್ತು. ಆದರೆ ಇದೀಗ ಆರೋಪಿ ಚಿರಾಗ್ ನನ್ನ ಬಂದಿಸುವಲ್ಲಿ ವಿಳಂಬ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಅಲ್ಲದೇ ಹಲವು ಪ್ರಭಾವಿ ರಾಜಕಾರಣಿಗಳ, ಸಂಘ ಸಂಸ್ಥೆಗಳಿಂದ ಒತ್ತಡ ಕೂಡ ಹಾಕಲಾಗುತ್ತಿದೆ ಎಂದು ಹೇಳಲಾಗಿದೆ. ಈ ಹಿನ್ನಲೆ ನೇರವಾಗಿ ಪಿಎಸ್‌ಐ ಸುನೀಲ್ ಅವರನ್ನು ಕರ್ತವ್ಯದಿಂದ ಅಮಾನತು ಮಾಡಿ ಪೋಲಿಸ್ ಇಲಾಖೆ ಆದೇಶ ಹೊರಡಿಸಿದೆ. ಇತ್ತ ಯಾವುದೆ ತಪ್ಪು ಇಲ್ಲದೆ ಕರ್ತವ್ಯದಿಂದ PSI ಅಮಾನತು ಮಾಡಲಾಗಿದೆ.

ಏನಿದು ಘಟನೆ.?

ಜೆಡಿಎಸ್ ಮುಖಂಡೆಯೊಬ್ಬರ ಪುತ್ರ ಚಿರಾಗ್ ಎಂಬಾತ ಪ್ರೀತಿ ಹೆಸರಲ್ಲಿ ದಿನನಿತ್ಯ ಕಿರುಕುಳ ನೀಡುತ್ತಿದ್ದು, ಇದರಿಂದ ಬೇಸತ್ತ ರಿಶೇಲ್ ಡಿಸೋಜಾ‌ ಜ.9 ರಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು.

ಈ ಕುರಿತು ಮೃತ ರಿಶೇಲ್ ಡಿಸೋಜಾ ತಂದೆ ಕ್ರಿಸ್ತೋದ್ ಡಿಸೋಜಾ ಕಾರವಾರ ತಾಲೂಕಿನ ಕದ್ರಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಚಿರಾಗ್ ಹಾಗೂ ನನ್ನ ಮಗಳು ರಿಶೇಲ್ ಇಬ್ಬರು ಪರಿಚಯಸ್ಥರು. ಆಗಾಗ ಚಿರಾಗ್ ನಮ್ಮ ಮನೆಯ ಬಳಿ ಸುತ್ತಾಡುತ್ತಿದ್ದ.

ಅಲ್ಲದೇ ಪ್ರೀತಿಸುವುದಾಗಿ ಕಾಡಿಸುತ್ತಿದ್ದ. ಆದರೆ ರಿಶೇಲ್ ಆತನ ಪ್ರೀತಿಯನ್ನು ನಿರಾಕರಿಸಿದ್ದಳು. ಇದರಿಂದ ಫೋನ್ ಮಾಡಿ ಕೂಡ ಹಿಂಸಿಸುತ್ತಿದ್ದ. ಜೊತೆಗೆ ನೀನು ಬದುಕಿದ್ದು ಪ್ರಯೋಜನವಿಲ್ಲ. ನೀನು ಹೇಗಾದರೂ ಸತ್ತುಹೋಗು, ನೀನು ಬದುಕಿರುವುದಕ್ಕಿಂತ ಸತ್ತುಹೋದರೆ ಒಳ್ಳೆಯದು ಅಂತ ಬೈಯ್ದಿದ್ದಾನೆ ಎಂದು ಆರೋಪಿಸಿದ್ದಾರೆ.

ಇದೀಗ ಜೆಡಿಎಸ್ ಮುಖಂಡೆಯ ಪುತ್ರ ಚಿರಾಗ್ ಕಾಟದಿಂದ ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದು, ಪ್ರೀತಿಸುವಂತೆ ಕಾಟ ನೀಡಿದ್ದಲ್ಲದೇ ಯುವತಿಯನ್ನು ರೇಪ್ ಮಾಡಿದ್ದಾರೆಂದು ಆರೋಪಿಸಿ ಯುವತಿ ಕುಟುಂಬ ದೂರು ನೀಡಿದ್ದರು.

Leave a Reply

Your email address will not be published. Required fields are marked *

Join WhatsApp Group
error: Content is protected !!