ಮೂಡುಬಿದಿರೆ:ದುಬೈಯಲ್ಲಿ ಉದ್ಯೋಗಸ್ಥನಾಗಿದ್ದು ಊರಿಗೆ ಬಂದ ಬಳಿಕ ಇಲ್ಲೇ ಹೋಟೆಲ್ ಉದ್ಯಮ ನಡೆಸುವ ಕನಸು ಕಂಡಿದ್ದ ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಇಲ್ಲಿನ ನಾಗರಕಟ್ಟೆ ಯಲ್ಲಿ ಶನಿವಾರ ಮಧ್ಯಾಹ್ನ ನಡೆದಿದೆ.

ನಾಗರಕಟ್ಟೆ-ಒಂಟಿಕಟ್ಟೆ ಕ್ರಾಸ್ ರಸ್ತೆಯ ಬಳಿ ಕಬ್ಬಿನ ಜ್ಯೂಸ್ ನ ಮಾರಾಟ ಮಾಡುತ್ತಿರುವ ಶ್ರೀನಿವಾಸ್ ಅವರ ಮಗ ದೀಕ್ಷಿತ್ (35) ಆತ್ಮಹತ್ಯೆ ಮಾಡಿಕೊಂಡ ಯುವಕ.

ನಾಗರಕಟ್ಟೆ ಬಳಿಯ ರಿಂಗ್ ರೋಡ್ ಹತ್ತಿರ ಹೊಟೇಲ್ ಉದ್ಯಮವನ್ನು ಆರಂಭಿಸಬೇಕೆಂದು ದೀಕ್ಷಿತ್ ಕನಸು ಕಂಡಿದ್ದು ಅದಕ್ಕೆ ತಕ್ಕ ಸಿದ್ಧತೆಯನ್ನೂ ಮಾಡಿಕೊಂಡಿದ್ದನೆನ್ನಲಾಗಿದೆ.

ಅನಾರೋಗ್ಯ ಪೀಡಿತರಾಗಿರುವ ತಾಯಿ ಮಲಗಿದ್ದ ವೇಳೆ ಮನೆಯ ಕೋಣೆಯ ಕಿಟಕಿಗೆ ಶಾಲನ್ನು ಬಳಸಿ ನೇಣು ಬಿಗಿದು ದೀಕ್ಷಿತ್‌ಆತ್ಮಹತ್ಯೆ ಮಾಡಿಕೊಂಡಿದ್ದು ಕೃತ್ಯಕ್ಕೆ ಕಾರಣ ತಿಳಿದು ಬಂದಿಲ್ಲ.

ಮೂಡುಬಿದಿರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *

Join WhatsApp Group
error: Content is protected !!