
ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಂ ನಲ್ಲಿ ತಲವಾರ್ ಮತ್ತು ಕೊಡಲಿ ಹಿಡಿದು ರೀಲ್ಸ್ ಮಾಡಿದ ಆರೋಪದ ಮೇಲೆ _arman_khan ಎಂಬ INSTAGRAM ಖಾತೆಯನ್ನು ಹೊಂದಿರುವ ಅರ್ಮಾನ್ ಹಸನ್ ಎಂಬಾತನ ಮೇಲೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಎಂಬ ಹೆಸರಿನ INSTAGRAM ಖಾತೆ ಹೊಂದಿರುವ ಅರ್ಮಾನ್ ಹಸನ್ ಎಂಬಾತನು ಕೈಯಲ್ಲಿ ತಲವಾರ ಮತ್ತು ಕೊಡಲಿಯನ್ನು ಹಿಡಿದು ಮ್ಯೂಜಿಕ್ ಒಂದಕ್ಕೆ ರೀಲ್ಸ್ ಮಾಡಿ ಆತನ INSTAGRAM ಖಾತೆಯಲ್ಲಿ ಪೊಸ್ಟ್ ಮಾಡಿದ್ದು, ಇದು ಸಾರ್ವಜನಿಕರಲ್ಲಿ ಭಯ ಹುಟ್ಟಿಸುವ ಸಾಧ್ಯತೆ ಇದ್ದು, ಈ ಹಿನ್ನಲೆ ಪೊಸ್ಟ್ ಮಾಡಿದ್ದ ಅರ್ಮಾನ್ ಹಸನ್ ಎಂಬಾತನ ವಿರುದ್ಧ ಸೂಕ್ತ ಕಾನೂನು ಕ್ರಮಕ್ಕೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.






