
ಪುತ್ತೂರು :ನಗರದ ದರ್ಬೆಯ ಬುಶ್ರಾ ಟವರ್ಸ್‌ನಲ್ಲಿ ಕಾರ್ಯಾಚರಿಸುತ್ತಿರುವ ಪ್ರಸಿದ್ಧ ಪಾದರಕ್ಷೆಗಳ ಮಳಿಗೆ ‘ನಯಾ ಚಪ್ಪಲ್ ಬಜಾರ್’ ತನ್ನ ಮಳಿಗೆಯನ್ನು ವಿಸ್ತರಿಸಿದೆ. ವಿಸ್ತರಿತ ಮಳಿಗೆಯ ಅದ್ಧೂರಿ ಉದ್ಘಾಟನಾ ಸಮಾರಂಭವು ಜ 22ರಂದು ಬೆಳಿಗ್ಗೆ 10:30ಕ್ಕೆ ನಡೆಯಲಿದೆ.
ಬುಶ್ರಾ ಎಜುಕೇಶನಲ್ ಟ್ರಸ್ಟ್‌ನ ಸಂಚಾಲಕರಾದ ಅಬ್ದುಲ್ ಅಜೀಜ್ ಬಿ.ಎ. ಅವರು ವಿಸ್ತರಿತ ಮಳಿಗೆಯನ್ನು ಉದ್ಘಾಟಿಸಲಿದ್ದಾರೆ. ಪುತ್ತೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಘ (PCCI) ಅಧ್ಯಕ್ಷ ರವಿಕೃಷ್ಣ ಡಿ. ಕಲ್ಲಾಜೆ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಮಹಾವೀರ್ ಮೆಡಿಕಲ್ಸ್‌ನ ರಚನಾ ಪಡಿವಾಲ್ ಅವರು ಮೊದಲ ಖರೀದಿಯನ್ನು ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.
ಕಾರ್ಯಕ್ರಮದಲ್ಲಿ ಜಿ.ಎಲ್. ಆಚಾರ್ಯ ಜುವೆಲ್ಲರ್ಸ್‌ನ ಬಲರಾಮ ಆಚಾರ್ಯ, ಸುದಾನ ವಸತಿ ಶಾಲೆಯ ಸಂಚಾಲಕ ರೆ. ಫಾ. ವಿಜಯ ಹಾರ್ವಿನ್, ಪುತ್ತೂರು ಸೀರತ್ ಕಮಿಟಿ ಅಧ್ಯಕ್ಷ ಅಬ್ದುಲ್ ಖಾದರ್, ಬೆಥನಿ ಶಾಲೆಯ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಅನಿತಾ, ಒಕ್ಕಲಿಗ ಸಮುದಾಯ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಚಿದಾನಂದ ಬೈಲಾಡಿ, ಮೆಡ್‌ಲ್ಯಾಂಡ್ ಆಸ್ಪತ್ರೆಯ ಅಧ್ಯಕ್ಷ ಡಾ. ಅಶ್ರಫ್ ಕಮ್ಮಾಡಿ, ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಉಮೇಶ್ ನಾಯಕ್, ಸಿಡ್ಕೊ ಪುತ್ತೂರು ಅಧ್ಯಕ್ಷ ಟಿ.ವಿ. ರವೀಂದ್ರನ್, ರೋಟರಿ ಕ್ಲಬ್ ಪುತ್ತೂರು ಅಧ್ಯಕ್ಷ ಡಾ. ಶಿವಪ್ರಕಾಶ್, ಎಕ್ಸ್‌ಟಿಇಎನ್ ಕಂಪೆನಿಯ ಸಿಇಒ ದಾವೂದ್ (ಬೆಂಗಳೂರು), ಸಾರ್ವಜನಿಕ ಗಣೇಶೋತ್ಸವ ಸಮಿತಿ ಕಿಲ್ಲೆಮೈದಾನ ಅಧ್ಯಕ್ಷ ಅಭಿಜಿತ್ ಶೆಟ್ಟಿ ನೆಲ್ಲಿಕಟ್ಟೆ, ಆಕರ್ಷಣ್ ಇಂಡಸ್ಟ್ರೀಸ್ ಸಿಇಒ ಕೆ.ಪಿ. ಸಾದಿಕ್, ಸುಲ್ತಾನ್ ಕಂಪೆನಿ ಕೊಡಾಜೆಯ ಫಾರೂಕ್ ಸುಲ್ತಾನ್, ಮದರ್ ಇಂಡಿಯಾದ ಎಂ.ಜಿ. ರಝಾಕ್ ಸೇರಿದಂತೆ ಹಲವರು ಗಣ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಕಾರ್ಯಕ್ರಮವನ್ನು ಸುರೇಶ್ ಶೆಟ್ಟಿ ನಿರ್ವಹಿಸಲಿದ್ದಾರೆ.
ವಿಶೇಷ ಆಕರ್ಷಣೆಗಳು:
ವಿಸ್ತರಿತ ಮಳಿಗೆಯಲ್ಲಿ ಪಾದರಕ್ಷೆಗಳೊಂದಿಗೆ ಆಭರಣಗಳು, ಬ್ರಾಂಡೆಡ್ ವಾಚ್‌ಗಳು, ಹೆಲ್ಮೆಟ್‌ಗಳು, ಸನ್‌ಗ್ಲಾಸ್‌ಗಳು, ಆಟಿಕೆಗಳು, ಗಿಫ್ಟ್ ಐಟಂಗಳು ಹಾಗೂ ಸ್ಪೋರ್ಟ್ಸ್ ವೇರ್‌ಗಳ ವಿಶಾಲ ಸಂಗ್ರಹ ಲಭ್ಯವಿದೆ. ಉದ್ಘಾಟನೆಯ ಅಂಗವಾಗಿ **‘ಪುತ್ತೂರು ಶಾಪಿಂಗ್ ಹಬ್ಬ’**ದ ಭಾಗವಾಗಿ ಗ್ರಾಹಕರಿಗೆ ‘ಲಕ್ಕಿ ಕೂಪನ್’ ಸೌಲಭ್ಯ ನೀಡಲಾಗುತ್ತಿದೆ ಎಂದು ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.






