ಪುತ್ತೂರು ಜಿಎಲ್ ಆಚಾರ್ಯ ಜ್ಯುವೆಲ್ಲರ್ಸ್‌ನಲ್ಲಿ ಗಣರಾಜ್ಯೋತ್ಸವದ ಪ್ರಯುಕ್ತ ಜ.22ರಿಂದ ಜ.26ರವರೆಗೆ ‘ರಿಪಬ್ಲಿಕ್ ಸೇಲ್’ ವಿಶೇಷ ರಿಯಾಯಿತಿ ಕೊಡುಗೆಗಳನ್ನು ಪ್ರಕಟಿಸಲಾಗಿದೆ. ಹಬ್ಬದ ವಾತಾವರಣಕ್ಕೆ ತಕ್ಕಂತೆ ಚಿನ್ನ ಹಾಗೂ ವಜ್ರಾಭರಣಗಳ ವಿಶಾಲ ಮತ್ತು ಆಕರ್ಷಕ ಸಂಗ್ರಹವನ್ನು ಗ್ರಾಹಕರಿಗೆ ಪರಿಚಯಿಸಲಾಗಿದೆ.
ಪ್ರಸ್ತುತ 24 ಕ್ಯಾರೆಟ್ ಚಿನ್ನದ ದರ 15,000 ರೂ. ದಾಟಿರುವ ಹಿನ್ನೆಲೆಯಲ್ಲಿ, ಬೆಲೆ ಏರಿಕೆಯ ಪರಿಣಾಮವನ್ನು ತಗ್ಗಿಸುವ ಉದ್ದೇಶದಿಂದ ರಿಪಬ್ಲಿಕ್ ಸೇಲ್ ಆಫರ್‌ಗಳನ್ನು ನೀಡಲಾಗುತ್ತಿದೆ. ಇದರ ಭಾಗವಾಗಿ ಚಿನ್ನದ ಆಭರಣಗಳ ತಯಾರಿಕಾ ಶುಲ್ಕದ ಮೇಲೆ 10 ಗ್ರಾಂಗೆ ಫ್ಲಾಟ್ 3,500 ರೂ. ರಿಯಾಯಿತಿ ಘೋಷಿಸಲಾಗಿದೆ.
ಅಲ್ಲದೆ ವಜ್ರಾಭರಣಗಳ ಕ್ಯಾರಟ್ ಮೇಲೆ ಗರಿಷ್ಠ 5,000 ರೂ. ವರೆಗೆ ಫ್ಲಾಟ್ ಡಿಸ್ಕೌಂಟ್ ನೀಡಲಾಗುತ್ತದೆ. ಚಿನ್ನದ ದರ ಏರಿಕೆಯ ಹಿನ್ನೆಲೆಯಲ್ಲಿ ಲೈಟ್ ವೈಟ್ ಹಾಗೂ 18 ಕ್ಯಾರೆಟ್‌ನಲ್ಲಿ ತಯಾರಿಸಿದ ಗೋಲ್ಡ್–ಲೈಟ್ ವಜ್ರಾಭರಣಗಳು ಇದೀಗ ಕೈಗೆಟಕುವ ದರದಲ್ಲಿ ಲಭ್ಯವಿವೆ. ವಜ್ರದ ಮೌಲ್ಯದ ಮೇಲೆ ಶೇ.90ರಷ್ಟು ಬೈಬ್ಯಾಕ್ ಸೌಲಭ್ಯವೂ ನೀಡಲಾಗುತ್ತಿದೆ.
ಆಧುನಿಕ ಹಾಗೂ ಪಾರಂಪರಿಕ ಚಿನ್ನದ ಆಭರಣಗಳು, ಮದುಮಗಳ ಅಲಂಕಾರ ಆಭರಣಗಳ ವಿನೂತನ ಸಂಗ್ರಹ, ಪ್ರಾಚಿ ಲೈಟ್ ಮತ್ತು ಲೈಟ್ ವೈಟ್ ಆಭರಣಗಳು ಗ್ರಾಹಕರ ಗಮನ ಸೆಳೆಯುತ್ತಿವೆ. ವಜ್ರಾಭರಣಗಳು ಹಾಗೂ ಗುಣಮಟ್ಟದ ಚಿನ್ನಾಭರಣಗಳ ಮಾರಾಟದಲ್ಲಿ ಹೆಸರುವಾಸಿಯಾಗಿರುವ ಜಿಎಲ್ ಆಚಾರ್ಯ ಜ್ಯುವೆಲ್ಲರ್ಸ್ ಮೂಡಬಿದ್ರೆ, ಸುಳ್ಯ, ಕುಶಾಲನಗರ ಮತ್ತು ಹಾಸನದಲ್ಲಿ ತನ್ನ ಮಳಿಗೆಗಳನ್ನು ಹೊಂದಿದೆ.
ಈ ರಿಪಬ್ಲಿಕ್ ಸೇಲ್ ಕೊಡುಗೆಗಳು ಷರತ್ತುಗಳ ಅನ್ವಯ ಸಂಸ್ಥೆಯ ಎಲ್ಲಾ ಮಳಿಗೆಗಳಲ್ಲಿ ಲಭ್ಯವಿದ್ದು, ಜನತೆ ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವಂತೆ ಸಂಸ್ಥೆಯ ಪ್ರಕಟಣೆ ತಿಳಿಸಿದೆ.

Leave a Reply

Your email address will not be published. Required fields are marked *

Join WhatsApp Group
error: Content is protected !!