ಬೆಂಗಳೂರು: ತಾಯಿ ಹಾಗೂ ದೊಡ್ಡಮ್ಮನ ಖಾಸಗಿ ಫೋಟೊಗಳನ್ನು ರಹಸ್ಯವಾಗಿ ಸೆರೆಹಿಡಿದು ಪ್ರಿಯಕರನಿಗೆ ಕಳುಹಿಸಿದ ಆರೋಪ‍ಕ್ಕೆ ಸಂಬಂಧಿಸಿದಂತೆ ಮಗಳು ಸೇರಿ ಇಬ್ಬರ ವಿರುದ್ಧ  ಬ್ಯಾಟರಾಯನಪುರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ನಗರದ ನಿವಾಸಿ 49 ವರ್ಷದ ಮಹಿಳೆ ನೀಡಿದ ದೂರಿನ ಮೇರೆಗೆ ಮಗಳು ಹಾಗೂ ಆಕೆಯ ಪ್ರಿಯಕರ ವರುಣ್ ವಿರುದ್ಧ ಎಫ್ಐಆರ್ ದಾಖಲಾಗಿದೆ‌

ನನಗೆ ಇಬ್ಬರು ಹೆಣ್ಣುಮಕ್ಕಳಿದ್ದಾರೆ. ಹಿರಿಯ ಮಗಳು ಬಿಬಿಎಂ ಓದುತ್ತಿದ್ದು, ವಿದ್ಯಾಭ್ಯಾಸಕ್ಕಾಗಿ ಕಳೆದ ವರ್ಷ ಮೊಬೈಲ್ ಕೊಡಿಸಿದ್ದೆವು. ಒಂದು ತಿಂಗಳ ಹಿಂದೆ ಫೋನ್ನಲ್ಲಿ ಅಪರಿಚಿತ ಯುವಕನೊಂದಿಗೆ ಮಾತನಾಡುತ್ತಿರುವುದನ್ನು ಕಂಡು ಅನುಮಾನ ವ್ಯಕ್ತವಾಗಿತ್ತು. ಈ ಬಗ್ಗೆ ಮಗಳಿಗೆ ತಿಳಿವಳಿಕೆ ನೀಡಿದ್ದೆವು. ಬಳಿಕ ಪಾಸ್ವರ್ಡ್ ತೆಗೆದುಕೊಂಡು ಮೊಬೈಲ್ ಪರಿಶೀಲಿಸಿದಾಗ ತನ್ನ ಹಾಗೂ ಅಕ್ಕನ ಖಾಸಗಿ ಫೋಟೊಗಳನ್ನು ಯುವಕನಿಗೆ ಕಳುಹಿಸಿರುವುದನ್ನು ಕಂಡು ಆಚ್ಚರಿಯಾಗಿತ್ತು’ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.

‘ತಾಯಿಯ ಖಾಸಗಿ ಫೋಟೊಗಳನ್ನು ಕಳುಹಿಸುವಂತೆ ಮಗಳಿಗೆ ಯುವಕ ಸಂದೇಶ ರವಾನಿಸಿರುವುದು ಗೊತ್ತಾಯಿತು. ಮೆಸೇಜ್ಗಳಲ್ಲಿ ಫೋಟೊ ಕಳಿಸುವಂತೆ ಯುವಕ ಒತ್ತಾಯಿಸಿದ್ದಾನೆ. ಮಗಳಿಗೆ ಬುದ್ಧಿಮಾತು ಹೇಳಿ, ಮೊಬೈಲ್ನಲ್ಲಿದ್ದ ಫೋಟೊಗಳನ್ನು ಅಳಿಸಲಾಗಿತ್ತು’ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

‘ಆ ನಂತರ, ಪ್ರೀತಿಸಿದ ಯುವಕನನ್ನೇ ಮದುವೆ ಆಗುತ್ತೇನೆ ಎಂದು ಮಗಳು ಜಗಳ ಮಾಡಿಕೊಂಡು ಕೆಲ ದಿನಗಳ ಹಿಂದೆ ಮನೆ ಬಿಟ್ಟು ಹೋಗಿದ್ದಾಳೆ‌. ತಮ್ಮ ಖಾಸಗಿ ಫೋಟೊಗಳನ್ನು ಯುವಕ ಬೇರೆಯವರಿಗೆ ಕಳುಹಿಸಿರುವ ಸಾಧ್ಯತೆಯಿದೆ. ಹೀಗಾಗಿ, ಮಗಳು ಹಾಗೂ ಆಕೆಯ ಪ್ರಿಯಕರನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ದೂರಿನಲ್ಲಿ ಯುವತಿಯ ತಾಯಿ ಆಗ್ರಹಿಸಿದ್ದಾರೆ

Leave a Reply

Your email address will not be published. Required fields are marked *

Join WhatsApp Group
error: Content is protected !!