ಕಡಬ: ತೋಟದಿಂದ ಅಡಿಕೆ ಕಳವು ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಒಬ್ಬ ಆರೋಪಿಯನ್ನು ಕಡಬ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಜ.25ರಂದು ಅಲಂಕಾರು ಗ್ರಾಮ, ಕಡಬ ತಾಲೂಕು ನಿವಾಸಿ ಸತೀಶ್ (36) ಅವರು ನೀಡಿದ ದೂರಿನಂತೆ ತೋಟದಿಂದ ಅಡಿಕೆ ಕಳವು ಮಾಡಿಕೊಂಡು ಇಬ್ಬರು ಪರಾರಿಯಾಗಿದ್ದ ಬಗ್ಗೆ ಕಡಬ ಪೊಲೀಸ್ ಠಾಣೆಯಲ್ಲಿ ಅ.ಕ್ರ.11/2026, ಕಲಂ 303(2) ಬಿಎನ್‌ಎಸ್ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ತನಿಖೆ ನಡೆಸಿದ ಪೊಲೀಸರು ಮೊದಲ ಆರೋಪಿಯಾದ ಜಯಂತ ಎಂ. (28), ಕಾಯಿಮಣ ಗ್ರಾಮ, ಕಡಬ ತಾಲೂಕು ಅವರನ್ನು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.
ಇನ್ನೊಬ್ಬ ಆರೋಪಿಯಾದ ಲಿಂಗಪ್ಪ (36), ಕಾಣಿಯೂರು ಗ್ರಾಮ ನಿವಾಸಿ, ನ್ಯಾಯಾಲಯದಿಂದ ನಿರೀಕ್ಷಣಾ ಜಾಮೀನು ಪಡೆದಿದ್ದಾರೆ. ಕಳವು ಮಾಡಿದ್ದ ಅಡಿಕೆಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *

Join WhatsApp Group
error: Content is protected !!