ಬಂಟ್ವಾಳ: ಸುಮಾರು 12 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಟ್ವಾಳ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬಂಟ್ವಾಳ ಗ್ರಾಮಾಂತರ ಠಾಣೆ ಅಪರಾಧ ಸಂಖ್ಯೆ 152/2014 ರಲ್ಲಿ ವಿದೇಶಿಗರ ಕಾಯ್ದೆ 14(a)(b)(c) ಹಾಗೂ ಐಪಿಸಿ 34 ಕಲಂ ಅಡಿಯಲ್ಲಿ ದಾಖಲಾಗಿದ್ದ ಪ್ರಕರಣದ ಆರೋಪಿ ಉಡುಪಿ ನಿವಾಸಿ ತಾಜ್ ಮೊಹಮ್ಮದ್ ಯುಸೂಫ್ (59) ಬಂಧಿತನಾಗಿದ್ದಾನೆ.
ಮಾನ್ಯ ಬಂಟ್ವಾಳ ಸಹಾಯಕ ಪೊಲೀಸ್ ಅಧೀಕ್ಷಕ ಯಶ್ ಕುಮಾರ್ ಶರ್ಮಾ (ಐಪಿಎಸ್) ಅವರ ನಿರ್ದೇಶನದಲ್ಲಿ, ಪೊಲೀಸ್ ಉಪನಿರೀಕ್ಷಕರಾದ ಮಂಜುನಾಥ ಟಿ. ಹಾಗೂ ಕೃಷ್ಣಕಾಂತ ಕೆ. ಅವರ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಸಲಾಯಿತು. ಸಿಬ್ಬಂದಿಗಳಾದ ಪಿಸಿ 2462 ಶಿವಾನಂದ ಮಡ್ಡಿ, ಪಿಸಿ 2467 ಶಿದ್ದಪ್ಪ ಹಾಗೂ ಪಿಸಿ 2474 ಪ್ರವೀಣ್ ಅವರನ್ನೊಳಗೊಂಡ ತಂಡ ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ ಆರೋಪಿಯನ್ನು ದಸ್ತಗಿರಿ ಮಾಡಿತು.
ಬಂಧಿತನನ್ನು ಫೆ.24ರಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.

Leave a Reply

Your email address will not be published. Required fields are marked *

Join WhatsApp Group
error: Content is protected !!