ಉಪ್ಪಿನಂಗಡಿ: ಇಲ್ಲಿನ ರಾಮ ಲಕ್ಷ್ಮಣ ಆರ್ಕೆಡ್‌ನ ಮಾಲಕ, ಕ್ಲಾಸಿಕ್ ಮೆನ್ಸ್ ವೇರ್ ಟೈಲರಿಂಗ್ ಸಂಸ್ಥೆಯ ಮಾಲಕರೂ ಆಗಿದ್ದು ವಿವಿಧ ಸಾಮಾಜಿಕ ಸಂಘಟನೆಗಳಲ್ಲಿ ತೊಡಗಿಸಿಕೊಂಡಿದ್ದ ಯು. ಕೆ. ರೋಹಿತಾಕ್ಷ (47) ರವರು ಅಲ್ಪ ಕಾಲದ ಅನಾರೋಗ್ಯದಿಂದಾಗಿ ಫೆ.24ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ವಯಂಸೇವಕನಾಗಿ, ಹಿಂದೂ ಪರ ಸಂಘಟನೆಗಳಲ್ಲಿ, ಉಪ್ಪಿನಂಗಡಿ ಶ್ರೀ ಮಾಧವ ಶಿಶು ಮಂದಿರದ ಸಂಸ್ಥಾಪಕ ಜೊತೆ ಕಾರ್ಯದರ್ಶಿಯಾಗಿ, ಟೈಲರ್ಸ್‌ ಅಸೋಸಿಯೇಶನ್‌ ಸಂಸ್ಥೆಯ ಅಧ್ಯಕ್ಷನಾಗಿ ಹಲವಾರು ಸಾಮಾಜಿಕ ಧಾರ್ಮಿಕ ಸಂಘಟನೆಗಳಲ್ಲಿ ತೊಡಗಿಸಿಕೊಂಡು ಚಿರಪರಿಚಿತರಾಗಿದ್ದ ಇವರು, ಕೆಲ ಸಮಯದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು.

ಮೃತರು ತಾಯಿ, ಪತ್ನಿ, ಒರ್ವ ಪುತ್ರ ಹಾಗೂ ಇಬ್ಬರು ಪುತ್ರಿಯರನ್ನು ಆಗಲಿದ್ದಾರೆ.

Leave a Reply

Your email address will not be published. Required fields are marked *

Join WhatsApp Group
error: Content is protected !!