
ಪುತ್ತೂರು, ಫೆ. 26: ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪ್ರತಿ ತಿಂಗಳ ಆರ್ಧಾ ನಕ್ಷತ್ರದ ಅಂಗವಾಗಿ ನಡೆಯುವ ಮೃತ್ಯುಂಜಯ ಹೋಮ ಫೆ. 27ರಂದು ನಡೆಯಲಿದೆ.
ಅದೇ ದಿನ ಶ್ರೀ ದೇವರಿಗೆ ಎಳ್ಳೆಣ್ಣೆ ಅಭಿಷೇಕವೂ ನೆರವೇರಲಿದೆ. ಮೃತ್ಯುಂಜಯ ಹೋಮ ಸೇವೆ ಮಾಡಿಸಲು ಇಚ್ಛಿಸುವ ಭಕ್ತರು ದೇವಳದ ಕೌಂಟರ್‌ನಲ್ಲಿ ಸೇವಾ ರಶೀದಿ ಪಡೆಯಬಹುದು. ಹಾಗೆಯೇ ಶ್ರೀ ದೇವರಿಗೆ ಶುದ್ಧ ಎಳ್ಳೆಣ್ಣೆ ಅಭಿಷೇಕ ಮಾಡಲು ಎಳ್ಳೆಣ್ಣೆ ಸಮರ್ಪಣೆಗೂ ಅವಕಾಶವಿದೆ. ಭಕ್ತರು ಸೇವಾ ರಶೀದಿ ಪಡೆದು ದೇವಳದ ಒಳಾಂಗಣದಲ್ಲಿ ಎಳ್ಳೆಣ್ಣೆ ಸಮರ್ಪಿಸಬಹುದು ಎಂದು ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ ಹಾಗೂ ಕಾರ್ಯನಿರ್ವಹಣಾಧಿಕಾರಿ ಕೆ.ವಿ. ಶ್ರೀನಿವಾಸ್ ತಿಳಿಸಿದ್ದಾರೆ.







