ಟೆಹ್ರಾನ್: ಅಮೆರಿಕ-ಇಸ್ರೇಲ್‌ ನಡೆಸಿದ ದಾಳಿಯ ಮೊದಲ ದಿನವೇ 160 ಕ್ಕೂ ಹೆಚ್ಚು ಮಕ್ಕಳು ಸಾವನ್ನಪ್ಪಿದ್ದಾರೆ. ದುಃಖದಲ್ಲಿರುವ ಕುಟುಂಬಸ್ಥರು ತಮ್ಮ ಮಕ್ಕಳ ಅಂತ್ಯಕ್ರಿಯೆನ್ನು ಸಾಮೂಹಿಕವಾಗಿ ನೆರವೇರಿಸಿದ್ದಾರೆ.

ಜೆಸಿಬಿಯಿಂದ ನೂರಾರು ಗುಂಡಿಗಳನ್ನು ತೋಡಲಾಗಿತ್ತು. ಅದರ ಡ್ರೋನ್‌ ದೃಶ್ಯದ ಫೋಟೊವನ್ನು ಇರಾನ್‌ ಹಂಚಿಕೊಂಡಿದೆ. ಗುಂಡಿ ಮುಂದೆ ಮೃತದೇಹ ಇಟ್ಟುಕೊಂಡು ಕುಟುಂಬಸ್ಥರು ಕಣ್ಣೀರಿಟ್ಟಿದ್ದಾರೆ. ಬಳಿಕ ಸಾಮೂಹಿಕ ಅಂತ್ಯಕ್ರಿಯೆ ನಡೆಸಿದ್ದಾರೆ.

ದಕ್ಷಿಣ ಇರಾನ್‌ನ ಮಿನಾಬ್ ಪಟ್ಟಣದ ಶಜರೆಹ್ ತಯೆಬೆಹ್ ಬಾಲಕಿಯರ ಪ್ರಾಥಮಿಕ ಶಾಲೆ ಮೇಲೆ ಫೆ.28 ರಂದು ದಾಳಿ ನಡೆಸಲಾಗಿತ್ತು. ಶೈಕ್ಷಣಿಕ ಸಂಸ್ಥೆ, ಆಸ್ಪತ್ರೆಗಳು, ಹೆಚ್ಚಿನ ಜನರು ಓಡಾಟವಿರುವ ಸ್ಥಳಗಳ ಮೇಲೆ ಉದ್ದೇಶಪೂರ್ವಕವಾಗಿ ದಾಳಿ ನಡೆಸಿದ್ದಾರೆ. ಇದು ಅಂತರರಾಷ್ಟ್ರೀಯ ಮಾನವೀಯ ಕಾನೂನಿನ ಅಡಿಯಲ್ಲಿ ಯದ್ಧ ಅಪರಾಧ ಎಂದು ಕರೆಯಲಾಗಿತ್ತು.

ಸಾಮೂಹಿಕ ಅಂತ್ಯಕ್ರಿಯೆಯಲ್ಲಿ ಸಾವಿರಾರು ಜನರು ಸೇರಿರುವುದನ್ನು ತೋರಿಸುವ ವೀಡಿಯೊವನ್ನು ಇರಾನ್ ನ ಸರಕಾರಿ ಮಾಧ್ಯಮ ಪ್ರಸಾರ ಮಾಡಿದೆ

Leave a Reply

Your email address will not be published. Required fields are marked *

Join WhatsApp Group
error: Content is protected !!