
ಪುತ್ತೂರು: 2025-26ನೇ ಆರ್ಥಿಕ ವರ್ಷದ ಅಂತ್ಯದ ಹಿನ್ನೆಲೆ ಮೆಸ್ಕಾಂ ವತಿಯಿಂದ ಮಾ.9ರಿಂದ ಮಾ.31ರವರೆಗೆ ತಾಲೂಕಿನಾದ್ಯಂತ ವಿಶೇಷ ವಿದ್ಯುತ್ ಬಿಲ್ ಕಂದಾಯ ವಸೂಲಾತಿ ಅಭಿಯಾನ ಹಮ್ಮಿಕೊಳ್ಳಲಾಗಿದೆ.
ಈ ಅವಧಿಯಲ್ಲಿ ಎಲ್ಲಾ ವರ್ಗದ ಗ್ರಾಹಕರು ತಮ್ಮ ಸ್ಥಾವರಗಳಿಗೆ ಸಂಬಂಧಿಸಿದ ಮಾರ್ಚ್ 2026ರ ತಿಂಗಳ ವಿದ್ಯುತ್ ಬಿಲ್‌ನ ಒಟ್ಟು ಮೊತ್ತ ಹಾಗೂ ಅನ್ವಯಿಸುವ ಅಧಿಕ ಭದ್ರತಾ ಠೇವಣಿ (Additional Security Deposit) ಮೊತ್ತವನ್ನು ಕಡ್ಡಾಯವಾಗಿ ಪಾವತಿಸುವಂತೆ ಮೆಸ್ಕಾಂ ಪ್ರಕಟಣೆಯಲ್ಲಿ ವಿನಂತಿಸಲಾಗಿದೆ.
ಅಭಿಯಾನದ ಅವಧಿಯಲ್ಲಿ ಬಾಕಿ ಪಾವತಿಸದ ಸ್ಥಾವರಗಳ ವಿದ್ಯುತ್ ಸಂಪರ್ಕವನ್ನು ನಿಲುಗಡೆಗೊಳಿಸಲಾಗುವುದು ಎಂದು ಮೆಸ್ಕಾಂ ಎಚ್ಚರಿಕೆ ನೀಡಿದೆ. ಗ್ರಾಹಕರು ತೊಂದರೆ ತಪ್ಪಿಸಿಕೊಳ್ಳಲು ನಿಗದಿತ ಅವಧಿಯೊಳಗೆ ಬಿಲ್ ಪಾವತಿಸಬೇಕೆಂದು ಪ್ರಕಟಣೆ ತಿಳಿಸಿದೆ.








