ಮ ಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆ ಮತ್ತು ಇರಾನ್-ಇಸ್ರೇಲ್ ಯುದ್ಧವು ಜಾಗತಿಕ ಮಾರುಕಟ್ಟೆಗಳಲ್ಲಿ ಏರಿಳಿತವನ್ನು ತೀವ್ರಗೊಳಿಸಿದೆ. ಇದೀಗ ಅರಬ್ಬರು ದೊಡ್ಡಣ್ಣನಿಗೇ ಶಾಕ್ ಕೊಡಲು ಚಿಂತನೆ ನಡೆಸಿದ್ದಾರೆ. ಇರಾನ್ ಮತ್ತು ಅಮೆರಿಕ-ಇಸ್ರೇಲ್ ನಡುವೆ ನಡೆಯುತ್ತಿರುವ ಭೀಕರ ಯುದ್ಧವು ಮಧ್ಯಪ್ರಾಚ್ಯದ ಆರ್ಥಿಕತೆಯ ಮೇಲೆ ಗಂಭೀರ ಪರಿಣಾಮ ಬೀರಿದೆ.

ಈ ಹಿನ್ನೆಲೆಯಲ್ಲಿ ಸೌದಿ ಅರೇಬಿಯಾ, ಸಂಯುಕ್ತ ಅರಬ್ ಎಮಿರೇಟ್ಸ್, ಕುವೈತ್ ಮತ್ತು ಕತಾರ್ ಸೇರಿದಂತೆ ಪ್ರಮುಖ ಗಲ್ಫ್ ರಾಷ್ಟ್ರಗಳು ಅಮೆರಿಕದೊಂದಿಗಿನ (America) ತಮ್ಮ ಶತಕೋಟಿ ಡಾಲರ್ ಮೌಲ್ಯದ ಹೂಡಿಕೆ ಮತ್ತು ವ್ಯಾಪಾರ ಒಪ್ಪಂದಗಳನ್ನು ಮರುಪರಿಶೀಲಿಸಲು ಮುಂದಾಗಿವೆ.

ಫೋರ್ಸ್ ಮಜೂರ್ ಮೊರೆ ಹೋದ ಅರಬ್ಬರು
ಅಮೆರಿಕಕ್ಕೆ ಇರಾನ್ ಕಂಡೂ ಕೇಳರಿಯದಂಥಾ ಹೊಡೆತ ಕೊಡುತ್ತಿದೆ. ಇರಾನ್ ಸೇನೆ ಮಧ್ಯ ಪ್ರಾಚ್ಯದ ಮೇಲೆ ಮನಸ್ಸೋ ಇಚ್ಛೆ ದಾಳಿ ಮಾಡುತ್ತಿದೆ. ಇದೀಗ ಆರ್ಥಿಕ ಸಂಕಷ್ಟವನ್ನು ಎದುರಿಸಲು ಅರಬ್ಬರು ಆಂತರಿಕವಾಗಿ ಚರ್ಚೆ ಆರಂಭಿಸಿವೆ. ಅಮೆರಿಕ ಜೊತೆ ಮಾಡಿಕೊಂಡ ಒಪ್ಪಂದಗಳನ್ನು ರದ್ದುಗೊಳಿಸಲು ಅಥವಾ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ಫೋರ್ಸ್ ಮಜೂರ್ ನಿಯಮವನ್ನು ಬಳಸಿಕೊಳ್ಳುವ ಬಗ್ಗೆ ಗಲ್ಫ್ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಯುದ್ಧದಂ ವೇಳೆ ಕಾನೂನುಬದ್ಧವಾಗಿ ಒಪ್ಪಂದದಿಂದ ಹೊರಬರಲು ಈ ನಿಯಮ ಅವಕಾಶ ನೀಡುತ್ತದೆ.

ಆರ್ಥಿಕತೆಗೆ ಹೊಡೆತ ನೀಡಿದ ಯುದ್ಧ
ವಿಶ್ವದ ಒಟ್ಟು ತೈಲ ಮತ್ತು ಅನಿಲ ಪೂರೈಕೆಯ ಶೇ. 20ರಷ್ಟು ಸಾಗುವ ಈ ಮಾರ್ಗದಲ್ಲಿ ಹಡಗುಗಳ ಸಂಚಾರ ವಿಳಂಬವಾಗುತ್ತಿದೆ. ಯುದ್ಧದ ಸಮಯದಲ್ಲಿ ಟ್ಯಾಂಕರ್‌ಗಳ ಮೇಲೆ ದಾಳಿ ನಡೆದಿರುವುದು ಆತಂಕಕ್ಕೆ ಕಾರಣವಾಗಿದೆ. ಇನ್ನು ಜಾಗತಿಕ ತೈಲ ಮಾರುಕಟ್ಟೆಯಲ್ಲಿನ ಏರುಪೇರಿನಿಂದ ಆದಾಯ ಕುಸಿದಿದೆ
ಇರಾನ್ ಕ್ಷಿಪಣಿಗಳು ಅಮೆರಿಕದ ನೆಲೆಗಳನ್ನು ಗುರಿಯಾಗಿಸಿಕೊಂಡು ನಡೆಸಿದ ದಾಳಿಯಿಂದಾಗಿ ಪ್ರವಾಸೋದ್ಯಮ ಕ್ಷೇತ್ರ ನಲುಗಿದೆ. ಸ್ವಂತ ಸುರಕ್ಷತೆಗಾಗಿ ಗಲ್ಫ್ ದೇಶಗಳು ರಕ್ಷಣಾ ಬಜೆಟ್ ಅನ್ನು ಹೆಚ್ಚಿಸಬೇಕಾದ ಅನಿವಾರ್ಯತೆ ಎದುರಾಗಿದೆ.

ಕಂಗಾಲಾಗಲಿದ್ದಾನೆ ದೊಡ್ಡಣ್ಣ
ಜಾಗತಿಕ ಕ್ರೀಡಾಕೂಟಗಳಿಗೆ ನೀಡುತ್ತಿರುವ ಬೃಹತ್ ಅನುದಾನ ಕಡಿತ ಆಗುತ್ತದೆ. ಅಮೆರಿಕದ ಕಂಪನಿಗಳೊಂದಿಗೆ ಮಾಡಿಕೊಂಡಿರುವ ವಾಣಿಜ್ಯ ಒಪ್ಪಂದಗಳಿಗೆ ಹೊಡೆತ ಬೀಳುತ್ತೆ. ಅಮೆರಿಕದ ಮಾರುಕಟ್ಟೆಯಲ್ಲಿ ಗಲ್ಫ್ ರಾಷ್ಟ್ರಗಳು ಹೊಂದಿರುವ ಶೇರುಗಳು ಮತ್ತು ಆಸ್ತಿಗಳ ಮಾರಾಟ ಮಾಡಲಾಗುತ್ತೆ. ಇದರಿಂದ ಅಮೆರಿಕಕ್ಕೆ ದೊಡ್ಡ ಹೊಡೆತ ಬೀಳುತ್ತೆ.

6 ದೇಶಗಳಲ್ಲಿ ಅಮೆರಿಕದ ರೇಡಾರ್ ಉಡೀಸ್!
ಇರಾನ್ ಕ್ಷಿಪಣಿ ಮತ್ತು ಡ್ರೋನ್ ದಾಳಿಗಳ ಮೂಲಕ ಮಧ್ಯಪ್ರಾಚ್ಯದಲ್ಲಿರುವ ಅಮೆರಿಕದ ಪ್ರಮುಖ ರಕ್ಷಣಾ ವ್ಯವಸ್ಥೆಗಳನ್ನು ಗುರಿಯಾಗಿಸಿಕೊಂಡಿದ್ದು, ಕತಾರ್, ಸೌದಿ ಅರೇಬಿಯಾ ಸೇರಿದಂತೆ ಆರು ದೇಶಗಳಲ್ಲಿನ ರಾಡಾರ್‌ಗಳು ನಿಷ್ಕ್ರಿಯಗೊಂಡಿವೆ. ಈ ದಾಳಿಗಳಿಂದಾಗಿ ಅಮೆರಿಕದ ‘ಥಾಡ್’ ಕ್ಷಿಪಣಿ ನಿರೋಧಕ ವ್ಯವಸ್ಥೆ ಮತ್ತು ಮಿಲಿಟರಿ ಸಂವಹನ ಜಾಲಕ್ಕೆ ತೀವ್ರ ಹಿನ್ನಡೆಯಾಗಿದೆ. ಆದ್ದರಿಂದ ಇನ್ಮುಂದೆ ಇರಾನ್ ಮನಸ್ಸೋ ಇಚ್ಛೆ ದಾಳಿ ಮಾಡುವ ಸಾಧ್ಯತೆ ಇದೆ.

ಅಮೆರಿಕದ ಅಧಿಕಾರಿಯೊಬ್ಬರು ನೀಡಿರುವ ಮಾಹಿತಿಯ ಪ್ರಕಾರ, ಗಲ್ಫ್‌ನಲ್ಲಿ ಅಮೆರಿಕದ ಕ್ಷಿಪಣಿ ರಕ್ಷಣಾ ಬ್ಯಾಟರಿಗಳನ್ನು ನಿರ್ದೇಶಿಸಲು ನಿರ್ಣಾಯಕವಾದ 300 ಮಿಲಿಯನ್ ಡಾಲರ್ ಮೌಲ್ಯದ ಪ್ರಮುಖ ರಾಡಾರ್ ವ್ಯವಸ್ಥೆಯನ್ನು ಇರಾನ್ ನಾಶಪಡಿಸಿದೆ.

ಸೌದಿ ಅರೇಬಿಯಾ, ಕತಾರ್, ಯುನೈಟೆಡ್ ಅರಬ್ ಎಮಿರೇಟ್ಸ್, ಜೋರ್ಡಾನ್, ಕುವೈತ್ ಮತ್ತು ಬಹ್ರೇನ್ ಸೇರಿದಂತೆ ಆರು ದೇಶಗಳಲ್ಲಿ ಅಮೆರಿಕದ ಮಿಲಿಟರಿ ನೆಲೆಗಳಲ್ಲಿದ್ದ ರಾಡಾರ್ ಹಾಗೂ ಕ್ಷಿಪಣಿ ಪತ್ತೆ ವ್ಯವಸ್ಥೆಗಳನ್ನು ಇರಾನ್ ಗುರಿಯಾಗಿಸಿಕೊಂಡಿದೆ

Leave a Reply

Your email address will not be published. Required fields are marked *

Join WhatsApp Group
error: Content is protected !!