ಕಲ್ಲಿಕೋಟೆ: ಕಾಲಘಟ್ಟದ ಪವಾಡ ಪುರುಷ, ಲಕ್ಷಾಂತರ ಭಕ್ತರ ಆರಾಧ್ಯರಾದ ಶೈಖ್ ಖುತುಬುಝ್ಝಮಾನ್ ಸಿ.ಎಂ ಅಬೂಬಕರ್ ಮುಸ್ಲಿಯಾರ್ (ಖ.ಸಿ) ಮಡವೂರು ಅವರ ಮಖಾಂ ಶರೀಫ್‌ನಲ್ಲಿ 36ನೇ ಉರೂಸ್ ಮುಬಾರಕ್ 2026ರ ಮಾರ್ಚ್ 24ರಿಂದ ಏಪ್ರಿಲ್ 2ರವರೆಗೆ ವಿಜೃಂಭಣೆಯಿಂದ ನಡೆಯಲಿದೆ.
ಜಾತಿ–ಮತ–ಧರ್ಮ ಭೇದವಿಲ್ಲದೆ ಶಾಂತಿ, ಪ್ರೀತಿ ಮತ್ತು ಸಾಮರಸ್ಯದ ಸಂದೇಶ ಸಾರಿದ ಮಹಾನ್ ವಲಿಯುಲ್ಲಾಹಿಯ ಉರೂಸ್ ಕಾರ್ಯಕ್ರಮಕ್ಕೆ ಲಕ್ಷಾಂತರ ಭಕ್ತರು ಆಗಮಿಸುವ ನಿರೀಕ್ಷೆಯಿದ್ದು, ಮಖಾಂ ನಗರಿ ಸಜ್ಜುಗೊಂಡಿದೆ ಎಂದು ಪ್ರಕಟಣೆ ತಿಳಿಸಿದೆ.
ಶವ್ವಾಲ್ 4ರಂದು ಬೆಳಿಗ್ಗೆ 9.30ಕ್ಕೆ ಸಮಸ್ತ ಅಧ್ಯಕ್ಷ ಸಯ್ಯಿದ್ ಜಿಫ್ರಿ ಮುತ್ತುಕೋಯ ತಂಙಳ್ ನೇತೃತ್ವದಲ್ಲಿ ಮಖಾಂ ಜಿಯಾರತ್ ಮೂಲಕ ಉರೂಸ್‌ಗೆ ಚಾಲನೆ ದೊರೆಯಲಿದೆ. ಸಯ್ಯಿದ್ ಝೈನುಲ್ ಆಬೀದೀನ್ ತಂಙಳ್ ಕುನ್ನುಂಗೈ ದ್ವಜಾರೋಹಣ ನೆರವೇರಿಸಲಿದ್ದಾರೆ. ಅತಾವುಲ್ಲಾ ತಂಙಳ್ ಉದ್ಯಾವರ ನೇತೃತ್ವದಲ್ಲಿ ಕುರ್‌ಆನ್ ಪಾರಾಯಣ ನಡೆಯಲಿದೆ.
ಮಾರ್ಚ್ 25ರಂದು ರಾತ್ರಿ 7ಕ್ಕೆ ಮಡವೂರು ಮೌಲಿದ್ ಪಾರಾಯಣ, ಮಾರ್ಚ್ 26ರಂದು ಸ್ವಲಾತ್ ಮಜ್ಲಿಸ್ (ಪಿಕೆ ಮುಹಮ್ಮದ್ ಬಾಖವಿ ವಾವಾಡ್ ನೇತೃತ್ವ), ಮಾರ್ಚ್ 27ರಂದು ಬುರ್ದಾ ಮಜ್ಲಿಸ್ ನಡೆಯಲಿದೆ. ಮಾರ್ಚ್ 28ರಂದು ಅಬ್ದುಲ್ ಮಜೀದ್ ಬಾಖವಿ ತಲಂಗರ ಅನುಸ್ಮರಣಾ ಭಾಷಣ ಮಾಡಲಿದ್ದಾರೆ.
ಮಾರ್ಚ್ 29ರಂದು ಸಯ್ಯಿದ್ ಮುಹಮ್ಮದ್ ಕೋಯ ಜಮಲುಲ್ಲೈಲಿ ತಂಙಳ್ ನೇತೃತ್ವದಲ್ಲಿ ಮಜ್ಲಿಸ್, ಮಾರ್ಚ್ 30ರಂದು ಬಶೀರ್ ಪೈಝಿ ದೇಶಮಂಗಳಂ ನೇತೃತ್ವದಲ್ಲಿ ಇಷ್ಕ್ ಮಜ್ಲಿಸ್ ನಡೆಯಲಿದೆ. ಮಾರ್ಚ್ 31ರಂದು ಸಿ.ಎಂ ಮಖಾಂ ಶರೀಫ್ ಅಧೀನದ ಜಾಮಿಅ ಅಶ್ಹರಿಯ್ಯದಲ್ಲಿ ಶಿಕ್ಷಣ ಪಡೆದ ಉಲಮಾಗಳಿಗೆ ಅಬ್ಬಾಸ್ ಅಲಿ ತಂಙಳ್ ಪಾಣಕ್ಕಾಡ್ ಅಶ್ಹರಿಯ್ಯ ಸನದು ಪ್ರಧಾನಿಸಲಿದ್ದಾರೆ.
ಏಪ್ರಿಲ್ 1ರಂದು ರಾತ್ರಿ 7ಕ್ಕೆ ಧಿಕ್ರ್ ದುಹಾ ಸಮ್ಮೇಳನ ಸಯ್ಯಿದ್ ಝೈನುಲ್ ಆಬೀದೀನ್ ತಂಙಳ್ ಕುನ್ನುಂಗೈ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಪಾಣಕ್ಕಾಡ್ ಸಯ್ಯಿದ್ ಸ್ವಾದಿಕಲಿ ತಂಙಳ್ ಉದ್ಘಾಟಿಸಲಿದ್ದು, ನಾಸಿರ್ ಹಯ್ಯ್ ತಂಙಳ್ ದುಹಾ ನಡೆಸಲಿದ್ದಾರೆ. ಸಮಸ್ತ ಕಾರ್ಯದರ್ಶಿ ಆಲಿಕುಟ್ಟಿ ಉಸ್ತಾದ್, ಮೂಡಿಗೆರೆ ಖಾಝಿ ಕೊಯ್ಯೋಡು ಉಮರ್ ಮುಸ್ಲಿಯಾರ್ ಮುಖ್ಯ ಭಾಷಣ ಮಾಡಲಿದ್ದಾರೆ.
ಕರ್ನಾಟಕ ಮತ್ತು ಕೇರಳದ ಹಲವು ಖಾಝಿಗಳು, ಉಲಮಾ–ಉಮರಾ ನಾಯಕರು, ಸೂಫೀವರ್ಯರು, ರಾಜಕೀಯ, ಸಾಮಾಜಿಕ ಹಾಗೂ ಶೈಕ್ಷಣಿಕ ಕ್ಷೇತ್ರದ ಮುಖಂಡರು ಭಾಗವಹಿಸಲಿದ್ದಾರೆ.
ಏಪ್ರಿಲ್ 2ರಂದು ಬೆಳಿಗ್ಗೆ 6ರಿಂದ ಸಂಜೆ 4ರವರೆಗೆ ಅನ್ನದಾನ ಕಾರ್ಯಕ್ರಮ ನಡೆಯಲಿದೆ. ನೆರ್ಚೆ ಹಾಗೂ ಕಾಣಿಕೆಗಳನ್ನು ಮಖಾಂ ಶರೀಫ್‌ಗೆ ನೇರವಾಗಿ ಅಥವಾ ಪ್ರಕಟಿಸಿರುವ ಬ್ಯಾಂಕ್ ಖಾತೆಗೆ ಜಮಾ ಮಾಡಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.














