
ಪುತ್ತೂರು: ಯುಗಾದಿ ಹಬ್ಬದ ಅಂಗವಾಗಿ ಪುತ್ತೂರಿನ ಪ್ರತಿಷ್ಠಿತ ಚಿನ್ನಾಭರಣ ಮಳಿಗೆ ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ಸ್ ಗ್ರಾಹಕರಿಗಾಗಿ ವಿಶೇಷ ರಿಯಾಯಿತಿ ಘೋಷಿಸಿದೆ.
ಯುಗಾದಿಗೆ ವಿಶೇಷವಾಗಿ ವಿನ್ಯಾಸಗೊಳಿಸಲಾದ ‘ಪ್ರಾಚಿ ಇಲೈಟ್’, ಟೆಂಪಲ್ ಜ್ಯುವೆಲ್ಲರಿ, ಆ್ಯಂಟಿಕ್ ಹಾಗೂ ಪರಂಪರೆಯ ವಿನ್ಯಾಸಗಳೊಂದಿಗೆ ಆಧುನಿಕ ಶೈಲಿಯ ಚಿನ್ನ ಮತ್ತು ವಜ್ರಾಭರಣಗಳ ವಿಶಾಲ ಸಂಗ್ರಹ ಮಳಿಗೆಯಲ್ಲಿ ಲಭ್ಯವಿದೆ. ಮದುವೆ ಹಾಗೂ ಹಬ್ಬಗಳಿಗೆ ತಕ್ಕಂತೆ ಎಲ್ಲಾ ವಯೋಮಿತಿಯ ಗ್ರಾಹಕರಿಗೆ ಆಯ್ಕೆಗಳು ಸಿದ್ಧವಾಗಿವೆ ಎಂದು ಸಂಸ್ಥೆ ತಿಳಿಸಿದೆ.
ಪುರುಷರಿಗಾಗಿ ವಿಶೇಷ ಚಿನ್ನ ಮತ್ತು ಡೈಮಂಡ್ ಆಭರಣಗಳು, ಗೋಲೈಟ್ ಹಾಗೂ ಕರಿಮಣಿಗಳ ಸಂಗ್ರಹವೂ ಲಭ್ಯವಿದೆ. ಹೆಚ್ಚುತ್ತಿರುವ ಚಿನ್ನದ ಬೆಲೆ ಹಿನ್ನೆಲೆ ಹಳೆಯ ವಿನ್ಯಾಸದ ಆಭರಣಗಳನ್ನು ಹೊಸ ಟ್ರೆಂಡ್ ವಿನ್ಯಾಸಗಳಿಗೆ ಬದಲಾಯಿಸಿಕೊಳ್ಳಲು ಇದು ಉತ್ತಮ ಅವಕಾಶವಾಗಿದೆ ಎಂದು ತಿಳಿಸಲಾಗಿದೆ.
ಮೇಕಿಂಗ್ ಚಾರ್ಜ್ ಮೇಲೆ ರಿಯಾಯಿತಿ
ಹಳದಿ ಟ್ಯಾಗ್ ಹೊಂದಿರುವ ಆಯ್ದ ಆಭರಣಗಳ ಮೇಕಿಂಗ್ ಶುಲ್ಕದ ಮೇಲೆ ಶೇ. 50ರವರೆಗೆ ರಿಯಾಯಿತಿ ನೀಡಲಾಗುತ್ತಿದೆ. ಈ ಆಫರ್ ಪುತ್ತೂರು, ಸುಳ್ಯ, ಹಾಸನ, ಕುಶಾಲನಗರ ಹಾಗೂ ಮೂಡಬಿದ್ರೆ ಶಾಖೆಗಳಲ್ಲಿ ಮಾರ್ಚ್ 18ರಿಂದ 23ರವರೆಗೆ ಮಾತ್ರ ಲಭ್ಯವಿರುತ್ತದೆ.
ಯುಗಾದಿ ಹಬ್ಬದ ಪ್ರಯುಕ್ತ ಚಿನ್ನ, ವಜ್ರ ಹಾಗೂ ಬೆಳ್ಳಿ ಆಭರಣಗಳ ಮೇಲೂ ಆಕರ್ಷಕ ಕೊಡುಗೆಗಳನ್ನು ನೀಡಲಾಗಿದೆ. ಹೆಚ್ಚಿನ ಮಾಹಿತಿಗೆ 8748877360ನ್ನು ಸಂಪರ್ಕಿಸಬಹುದು ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.
‘ಗ್ರಾಹಕರ ನಂಬಿಕೆಯೇ ನಮ್ಮ ಬಲ’ ಎಂಬ ಆಶಯದೊಂದಿಗೆ ಈ ವಿಶೇಷ ಆಫರ್‌ಗಳನ್ನು ಪರಿಚಯಿಸಿದ್ದೇವೆ ಎಂದು ಸಂಸ್ಥೆಯ ಅಧ್ಯಕ್ಷ ಜಿ.ಎಲ್. ಬಲರಾಮ ಆಚಾರ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.














