ಬೇ ಸಿಗೆಯಲ್ಲಿ ನಿಮ್ಮ ಫ್ಯಾನ್‌ನಿಂದ ತಂಪಾದ ಗಾಳಿ ಬರುತ್ತಿಲ್ಲವೇ? ಕೇವಲ ಎರಡು ರೂಪಾಯಿಯಿಂದ ತಂಪಾದ ಗಾಳಿಯನ್ನು ಪಡೆಯುವ ಸರಳ ವಿಧಾನವನ್ನು ಈ ಲೇಖನದಲ್ಲಿ ವಿವರಿಸಲಾಗಿದೆ. ನೀವು ಈ ಸುಲಭ ಉಪಾಯ ಬಳಸಿಕೊಳ್ಳಬಹುದು.
ಬೆಳಗ್ಗೆ 10 ಗಂಟೆ ಆಗ್ತಿದ್ದಂತೆ ಬಿಸಿಲು ಶುರುವಾಗುತ್ತದೆ.ಸೆಕೆ ಕಡಿಮೆಯಾಗಲೆಂದು ಫ್ಯಾನ್ ಆನ್ ಮಾಡಿದರೂ ಕೆಲವೊಮ್ಮೆ ತಂಪಾದ ಗಾಳಿ ಬರಲ್ಲ. ಫ್ಯಾನ್‌ನ ರೆಕ್ಕೆಗಳು ಗರಗರ ಅಂತ ತಿರುಗಿದ್ರೂ ಗಾಳಿ ಮಾತ್ರ ದೇಹಕ್ಕೆ ತಂಪು ನೀಡಲ್ಲ. ಕೇವಲ ಎರಡು ರೂಪಾಯಿಯಲ್ಲಿ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು.
ಸೀಲಿಂಗ್ ಫ್ಯಾನ್‌ನಿಂದ ತಂಪಾದ ಗಾಳಿ ಬರುತ್ತಿರಲ್ಲ. ಇದಕ್ಕೆ ಕಾರಣ ನಿಮ್ಮ ಫ್ಯಾನ್ ರೆಕ್ಕೆಗಳ ಮೇಲೆ ಕುಳಿತಿರುವ ಧೂಳು. ರೆಕ್ಕೆಗಳ ಮೇಲಿರುವ ಧೂಳು ತೆಗೆಯಲು ನೀವು ಎರಡು ರೂಪಾಯಿ ಖರ್ಚು ಮಾಡಬೇಕಾಗುತ್ತದೆ. ಎರಡು ರೂಪಾಯಿಯ ಪರಿಹಾರ ಏನು ಎಂದು ನೋಡೋಣ ಬನ್ನಿ.
ಎರಡು ರೂಪಾಯಿ ನೀಡಿ ಅಂಗಡಿಯಿಂದ ಶಾಂಪ್ಯೂ ತೆಗೆದುಕೊಂಡು ಬನ್ನಿ. ಒಂದು ಬಕೆಟ್‌ಗೆ ನೀರು ಹಾಕಿ, ಅದಕ್ಕೆ ಶಾಂಪ್ಯೂ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿಕೊಂಡು ಎತ್ತಿಟ್ಟುಕೊಳ್ಳಿ. ತದನಂತರ ಒಣಬಟ್ಟೆಯಿಂದ ಸೀಲಿಂಗ್ ಫ್ಯಾನ್ ರೆಕ್ಕೆಗಳ ಮೇಲೆ ಧೂಳು ಕ್ಲೀನ್ ಮಾಡಿಕೊಳ್ಳಿ.
ನಂತರ ಶಾಂಪ್ಯೂ ಸೇರಿಸಿರುವ ನೀರಿಗೆ ಕಾಟನ್ ಬಟ್ಟೆ ಅದ್ದಿ ನಿಮ್ಮ ಸೀಲಿಂಗ್ ಫ್ಯಾನ್ ಸಂಪೂರ್ಣವಾಗಿ ಸ್ವಚ್ಛವಾಗಿಸಿಕೊಳ್ಳಿ. ನಂತರ ಒಣಬಟ್ಟೆಯಿಂದ ಮತ್ತೊಮ್ಮೆ ಸೀನಿಂಗ್ ಫ್ಯಾನ್ ಮೇಲಿನ ತೇವ ಒರಿಸಿಕೊಂಡ್ರೆ ತಂಪಾದ ಗಾಳಿ ನಿಮ್ಮದಾಗುತ್ತದೆ. ಈ ರೀತಿ ಫ್ಯಾನ್ ಸ್ವಚ್ಛಗೊಳಿಸಿದ್ರೆ ಬೇಸಿಗೆಯಲ್ಲಿ ತಂಪಾದ ಗಾಳಿಯನ್ನು ನಿಮ್ಮದಾಗಿಸಿಕೊಳ್ಳಬಹುದು.
ಇದೇ ರೀತಿಯಲ್ಲಿಯೇ ನಿಮ್ಮ ಬಳಿ ಟೇಬಲ್ ಫ್ಯಾನ್ ಸಹ ಸ್ವಚ್ಛಗೊಳಿಸಿಕೊಳ್ಳಬಹುದು. ಏರ್ ಕೂಲರ್‌ನಿಂದಲೂ ತಂಪಾದ ಗಾಳಿ ಬರದಿದ್ರೂ ಅದನ್ನು ಕ್ಲೀನ್ ಮಾಡಿಕೊಳ್ಳಿ. ಏರ್ ಕೂಲರ್‌ನಿಂದ ಗಾಳಿ ಬೀಸುವ ಭಾಗದಲ್ಲಿ ಅತಿಯಾದ ಧೂಳು, ಕಸಕಡ್ಡಿ ಸಿಲುಕಿದ್ರೂ ಗಾಳಿಯ ವೇಗ ಕಡಿಮೆಯಾಗಿರುತ್ತದೆ.














