ಸ್ವಯಂ ಘೋಷಿತ ದೇವಮಾನ, ಜ್ಯೋತಿಷಿ ಎಂದೇ ಗುರುತಿಸಿಕೊಂಡು ಭಕ್ತರಿಗೆ ವಂಚಿಸುತ್ತಿದ್ದ ನಾಸಿಕ್ ಗುರೂಜಿ ಅಶೋಕ್ ಖಾರಟ್ ಬಂಧನ ಬಳಿಕ ಸ್ಫೋಟಕ ಮಾಹಿತಿಗಳು ಹೊರಬಂದಿದೆ. ಇದೀಗ ಎಸ್‌ಐಟಿ ಪೊಲೀಸರ ತನಿಖೆ ತೀವ್ರಗೊಂಡಿದ್ದು, ಸ್ವಯಂಘೋಷಿತ ದೇವಮಾನವನ ಹಲವು ಫೋನ್‌ಗಳನ್ನು ವಶಕ್ಕೆ ಪಡೆದು ಸಿಡಿಆರ್ ಡೇಟಾ ರಿಟ್ರೀವ್ ಮಾಡಲಾಗಿದೆ.ಈ ಡೇಟಾಗಳ ಮಾಹಿತಿಂದ ತನಿಖೆ ಪ್ರಮುಖ ರಾಜಕಾರಣಿಗಳು, ಸಚಿವರು, ಶಾಸಕರತ್ತ ತಿರುಗಿದೆ.

ರಾಸಲೀಲೆ ಗುರೂಜಿಯ ಕಾಮಪುರಾಣ ಬಯಲು

100ಕ್ಕೂ ಹೆಚ್ಚು ಮಹಿಳೆಯರನ್ನು ಧಾರ್ಮಿಕ, ಆಧ್ಯಾತ್ಮ, ಪೂಜೆ ಹೆಸರಿನಲ್ಲಿ ಬಳಸಿಕೊಂಡಿರುವ ಅಶೋಕ್ ಖಾರಟ್ ವಿಚಾರಣೆ ಎದುರಿಸುತ್ತಿದ್ದಾನೆ. ಇತ್ತ ಈತನ ಹಲವು ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಬಂಧನ ವೇಳೆ ಅಶೋಕ್ ಖಾರಟ್ ಹಲವು ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಈ ಫೋನ್‌ಗಳ ಕಾಲ್ ಡಿಟೇಲ್ ರೆಕಾರ್ಡ್(CDR) ಡೇಟಾ ರಿಟ್ರೀವ್ ಮಾಡಲಾಗಿದೆ. ಈ ಅಂಕಿ ಅಂಶಗಳೇ ಇದೀಗ ತನಿಖೆಯ ದಿಕ್ಕು ಬದಲಿಸಿದೆ.

ಯಾವ ನಾಯಕರ ಜೊತೆ ಸಂಪರ್ಕ

150ಕ್ಕೂ ಹೆಚ್ಚು ಮಹಿಳೆಯರನ್ನು ಈತ ಬಳಸಿಕೊಂಡಿದ್ದಾನೆ. ಹಲವರಿಗೆ ಗರ್ಭಪಾತಕ್ಕೆ ಮಾತ್ರೆಯನ್ನೂ ನೀಡಿದ್ದಾನೆ. ಈತನ ಲ್ಯಾಪ್‌ಟಾಪ್, ಮೊಬೈಲ್‌ನಿಂದ 200ಕ್ಕೂ ಹೆಚ್ಚು ವಿಡಿಯೋ ವಶಕ್ಕೆ ಪಡೆಯಲಾಗಿದೆ. ಈತನ ಫೋನ್ ಕಾಲ್ ರೆಕಾರ್ಡ್ ಹೊಸ ಕತೆ ಹೇಳುತ್ತಿದೆ. ಈ ಅಶೋಕ್ ಖಾರಟ್, ನಿರಂತರವಾಗಿ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ, ಸಚಿವ ಚಂದ್ರಕಾಂತ್ ಪಾಟೀಲ್, ಮಾಜಿ ಮಹಿಳಾ ಆಯೋಗ್ಯದ ಅಧ್ಯೆಕ್ಷೆ ರೂಪಾಲಿ ಚಕಾನ್ಕರ್ ಸೇರಿದಂತೆ ಹಲವು ರಾಜಕಾರಣಿಗಳು ಜೊತೆ ನಿರಂತರ ಸಂಪರ್ಕದಲ್ಲಿರುವುದು ಬಯಲಾಗಿದೆ.

ರೂಪಾಲಿ ಚಕಾನ್ಕರ್ ಜೊತೆ ಕಳೆದ ವರ್ಷ 177 ಕರೆ ಮಾಡಿ ಮಾತನಾಡಿದ್ದಾನೆ. ಒಟ್ಟು 33,727 ಸೆಕೆಂಡ್ ಮಾತನಾಡಿದ್ದಾನೆ. ಅಂದರೆ ಕಳೆದ ವರ್ಷ ರೂಪಾಲಿ ಹಾಗೂ ಅಶೋಕ್ ಖಾರಟ್ ಫೋನ್ ಮೂಲಕ ಬರೋಬ್ಬರಿ 9 ಗಂಟೆ 36 ನಿಮಿಷ ಮಾತನಾಡಿದ್ದಾರೆ. ರೂಪಾಲಿ ಸಹೋದರಿ 326 ಬಾರಿ ಅಶೋಕ್ ಖಾರಟ್‌ಗೆ ಕರೆ ಮಾಡಿದ್ದಾರೆ ಎಂದು ಸಾಮಾಜಿಕ ಹೋರಾಟಗಾರ ದಮಾನಿಯಾ ಗಂಭೀರ ಆರೋಪ ಮಾಡಿದ್ದಾರೆ. ಸಿಡಿಆರ್ ದಾಖಲೆಗಳು ಈ ಮಾಹಿತಿ ಹೇಳುತ್ತಿದೆ ಎಂದು ಆರೋಪಿಸಿದ್ದಾರೆ.

ಅಶೋಕ್ ಖಾರಟ್ ಹಾಗೂ ಏಕನಾಥ್ ಶಿಂದೆ ಕಳೆದ ವರ್ಷ ಒಟ್ಟು 17 ಭಾರಿ ಫೋನ್ ಮೂಲಕ ಮಾತುಕತೆ ನಡೆಸಿದ್ದಾರೆ. ಈ ಪೈಕಿ 7 ಬಾರಿ ಕರೆಯನ್ನು ಏಕನಾಥ್ ಶಿಂಧೆ ಮಾಡಿದ್ದರೆ, 10 ಬಾರಿ ಅಶೋಕ್ ಖಾರಟ್ ಕರೆ ಮಾಡಿದ್ದಾರೆ. 17 ಕರೆಗಳ ಪೈಕಿ ಒಂದು ಕರೆಯಲ್ಲಿ 21 ನಿಮಿಷ ಮಾತನಾಡಿದ್ದಾರೆ ಎಂದು ದಮಾನಿಯಾ ಹೇಳಿದ್ದಾರೆ. ದಾಖಲೆಗಳು ಈ ಆರೋಪಕ್ಕೆ ಪುಷ್ಠಿ ನೀಡುತ್ತಿದೆ ಎಂದಿದ್ದಾರೆ.

ಹಲವು ರಾಜಕಾರಣಿಗಳ ಜೊತೆ ನಿರಂತರ ಸಂಪರ್ಕ

ಸಿಡಿಆರ್ ದಾಖಲೆಗಳಲ್ಲಿ ಅಶೋಕ್ ಖಾರಟ್ ನಿರಂತರವಾಗಿ ಸಚಿವ ದೀಪಕ್ ಕೇಸರ್ಕರ್, ಎನ್‌ಸಿಪಿ ರಾಜ್ಯ ಅಧ್ಯಕ್ಷ ಸುನಿಲ್ ತತ್ಕಾರೆ, ಸಚಿವ ಆಶಿಶ್ ಸೆಲ್ಲಾರ್ ಜೊತೆಗೂ ಸಂಪರ್ಕದಲ್ಲಿದ್ದರು ಎಂದು ದಮಾನಿಯಾ ಹೇಳಿದ್ದಾರೆ.

Leave a Reply

Your email address will not be published. Required fields are marked *

Join WhatsApp Group
error: Content is protected !!