ಪಶ್ಚಿಮ ಏಷ್ಯಾದಲ್ಲಿ ಸಂಘರ್ಷ ತಾರಕಕ್ಕೇರಿರುವ ಬೆನ್ನಲ್ಲೇ, ನಾಪತ್ತೆಯಾಗಿರುವ ಅಮೆರಿಕದ ಎಫ್-15 ಯುದ್ಧ ವಿಮಾನದ ಪೈಲಟ್‌ನ ತಾಯಿ ತನ್ನ ಮಗನನ್ನು ಹುಡುಕಿಕೊಡುವಂತೆ ಮಾಡಿದ್ದ ಮನವಿಗೆ ಇರಾನ್ ಸರ್ಕಾರ ಅಧಿಕೃತವಾಗಿ ಪ್ರತಿಕ್ರಿಯಿಸಿದೆ. ಆದರೆ, ಈ ಪ್ರತಿಕ್ರಿಯೆಯು ರಾಜತಾಂತ್ರಿಕವಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧದ ವಾಗ್ದಾಳಿಯಾಗಿ ಮಾರ್ಪಟ್ಟಿದೆ.

ಇತ್ತೀಚೆಗೆ ನಡೆದ ವೈಮಾನಿಕ ದಾಳಿಯ ಸಂದರ್ಭದಲ್ಲಿ ಅಮೆರಿಕದ ಎಫ್-15 ವಿಮಾನವೊಂದು ಪತನಗೊಂಡಿತ್ತು. ಅದರಲ್ಲಿದ್ದ ಪೈಲಟ್ ಬಗ್ಗೆ ಯಾವುದೇ ಮಾಹಿತಿ ಲಭ್ಯವಿರಲಿಲ್ಲ. ಈ ಹಿನ್ನೆಲೆಯಲ್ಲಿ ಪೈಲಟ್‌ನ ತಾಯಿ, ಇರಾನ್ ಸರ್ಕಾರಕ್ಕೆ ಮನವಿ ಮಾಡಿ ತನ್ನ ಮಗ ಎಲ್ಲಿದ್ದರೂ ಆತನನ್ನು ಸುರಕ್ಷಿತವಾಗಿ ಒಪ್ಪಿಸುವಂತೆ ಕೇಳಿಕೊಂಡಿದ್ದರು.

ಇರಾನ್ ವಿದೇಶಾಂಗ ಸಚಿವಾಲಯದ ವಕ್ತಾರರು ಈ ಬಗ್ಗೆ ಪ್ರತಿಕ್ರಿಯಿಸಿ, “ಒಬ್ಬ ತಾಯಿಯ ನೋವು ನಮಗೆ ಅರ್ಥವಾಗುತ್ತದೆ. ಆದರೆ ಅಮೆರಿಕದ ತಾಯಂದಿರು ಅರ್ಥಮಾಡಿಕೊಳ್ಳಬೇಕಾದ ವಿಷಯವೊಂದಿದೆ. ನಿಮ್ಮ ಮಕ್ಕಳಿಗೆ ಇರಾನ್‌ನಿಂದ ಯಾವುದೇ ಅಪಾಯವಿಲ್ಲ, ಬದಲಿಗೆ ಯುದ್ಧಕೋರ ನೀತಿ ಅನುಸರಿಸುತ್ತಿರುವ ಅಧ್ಯಕ್ಷ ಟ್ರಂಪ್ ಅವರಿಂದಲೇ ನಿಮ್ಮ ಮಕ್ಕಳ ಜೀವಕ್ಕೆ ಹೆಚ್ಚಿನ ಅಪಾಯವಿದೆ” ಎಂದು ಹೇಳಿದ್ದಾರೆ.
ಟ್ರಂಪ್ ಅವರ ಅವಿವೇಕದ ನಿರ್ಧಾರಗಳು ಅಮೆರಿಕದ ಸಾವಿರಾರು ಸೈನಿಕರನ್ನು ವಿನಾಕಾರಣ ಸಾವಿನ ದವಡೆಗೆ ತಳ್ಳುತ್ತಿವೆ ಎಂದು ಇರಾನ್ ಆರೋಪಿಸಿದೆ.

Leave a Reply

Your email address will not be published. Required fields are marked *

Join WhatsApp Group
error: Content is protected !!