ಮೂಡುಬಿದಿರೆ: ಪಟ್ಟಣದ ಬಸ್‌ಸ್ಟ್ಯಾಂಡ್ ಸಮೀಪದ ನವಮಿ ಪ್ಲಾಜಾದಲ್ಲಿ ಜಿ.ಎಲ್. ಆಚಾರ್ಯ ಜುವೆಲ್ಲರ್ಸ್‌ನ ನೂತನ ಮಳಿಗೆ ಭಾನುವಾರ ಉದ್ಘಾಟನೆಯಾಯಿತು.
ಆಳ್ವಾಸ್ ಎಜುಕೇಷನ್ ಫೌಂಡೇಶನ್ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಮಳಿಗೆಯನ್ನು ಉದ್ಘಾಟಿಸಿ ಮಾತನಾಡಿ, ಸಂಸ್ಥೆಯ ಸ್ಥಾಪಕರಾದ ಜಿ.ಎಲ್. ಆಚಾರ್ಯರು ವೃತ್ತಿ ಮತ್ತು ಸಮಾಜಮುಖಿ ಚಿಂತನೆಗಳನ್ನು ಸಮನ್ವಯಗೊಳಿಸಿದವರು ಎಂದು ಹೇಳಿದರು. ಅವರ ಮಾರ್ಗದರ್ಶನವನ್ನು ಅನುಸರಿಸುತ್ತಿರುವ ಪುತ್ರ ಜಿ.ಎಲ್. ಬಲರಾಮ ಆಚಾರ್ಯ ಸಂಸ್ಥೆಯನ್ನು ಅಭಿವೃದ್ಧಿಯ ದಿಕ್ಕಿನಲ್ಲಿ ಮುನ್ನಡೆಸುತ್ತಿದ್ದಾರೆ ಎಂದರು. ಸಂಸ್ಥೆ ಐದು ಶಾಖೆಗಳಾಗಿ ಬೆಳೆಯುತ್ತಿರುವುದು ಶ್ಲಾಘನೀಯ. ಎರಡು ವರ್ಷಗಳ ಹಿಂದೆ ಆರಂಭಿಸಿದ್ದ ಮಳಿಗೆಯನ್ನು ಇಂದಿನ ಅಗತ್ಯಗಳಿಗೆ ಅನುಗುಣವಾಗಿ ಸುಧಾರಿಸಿ ಸ್ಥಳಾಂತರಿಸಿರುವುದು ಉತ್ತಮ ಬೆಳವಣಿಗೆ ಎಂದು ಅಭಿಪ್ರಾಯಪಟ್ಟರು.
ಮಾಜಿ ಸಚಿವ ಅಭಯಚಂದ್ರ ಜೈನ್, ಶ್ರೀ ಧನಲಕ್ಷ್ಮಿ ಕ್ಯಾಶ್ಯ ಎಕ್ಸ್‌ಪೋರ್ಟ್ಸ್‌ನ ಶ್ರೀಪತಿ ಭಟ್, ಚೌಟರ ಅರಮನೆಯ ಕುಲದೀಪ ಎಂ., ನವಮಿ ಗ್ರೂಪ್‌ನ ಆಡಳಿತ ನಿರ್ದೇಶಕ ನಂದಕುಮಾರ್ ಕುಡ್ಡ, ನಿಶ್ಚಿತಾ ಗ್ರೂಪ್‌ನ ಪ್ರವರ್ತಕ ನಾರಾಯಣ ಪಿ.ಎಂ. ಉಪಸ್ಥಿತರಿದ್ದು ಶುಭಾಶಯ ಕೋರಿದರು.
ಸಂಸ್ಥೆಯ ಚೇರ್‌ಮನ್ ಜಿ.ಎಲ್. ಬಲರಾಮ ಆಚಾರ್ಯ ಪ್ರಾಸ್ತಾವಿಕವಾಗಿ ಮಾತನಾಡಿ, ಹೊಸ ತಲೆಮಾರಿನ ಗ್ರಾಹಕರ ಅಭಿರುಚಿಗೆ ತಕ್ಕಂತೆ ವಿಶಾಲ ಮತ್ತು ಆಧುನಿಕ ವಿನ್ಯಾಸದ ಶೋರೂಮ್ ನಿರ್ಮಿಸಲಾಗಿದೆ. ನವೀನ ಮಾದರಿಯ ಚಿನ್ನಾಭರಣಗಳು ಹಾಗೂ ಆಕರ್ಷಕ ವಿನ್ಯಾಸದ ಆಭರಣಗಳನ್ನು ಗ್ರಾಹಕರಿಗೆ ಒದಗಿಸಲಾಗುವುದು ಎಂದರು. ಕರಾವಳಿ ಭಾಗದ ಗ್ರಾಹಕರಿಗೆ ಗುಣಮಟ್ಟದ ಆಭರಣಗಳೊಂದಿಗೆ ಸೇವೆ ನೀಡುತ್ತಾ ಬಂದಿರುವ ಸಂಸ್ಥೆ, ಮೂಡುಬಿದಿರೆಯ ಗ್ರಾಹಕರಿಗೂ ಉತ್ತಮ ಅನುಭವ ನೀಡಲಿದೆ ಎಂದು ತಿಳಿಸಿದರು.
ನಿರ್ದೇಶಕರಾದ ಲಕ್ಷ್ಮೀಕಾಂತ ಬಿ. ಆಚಾರ್ಯ, ರಾಜೀವ್ ಬಲರಾಮ ಆಚಾರ್ಯ, ಸುಧನ್ವ ಆಚಾರ್ಯ ಹಾಗೂ ಕುಟುಂಬಸ್ಥರು, ಸಿಬ್ಬಂದಿ ಉಪಸ್ಥಿತರಿದ್ದರು. ದೀಕ್ಷಾ ಬಂಗೇರ ಕಾರ್ಯಕ್ರಮ ನಿರೂಪಿಸಿದರು.














