ಮಂಜೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ ಮತ ಎಣಿಕೆಯ 8ನೇ ಸುತ್ತು ಮುಕ್ತಾಯಗೊಂಡಿದ್ದು, ಯುಡಿಎಫ್ ಅಭ್ಯರ್ಥಿ ಎ.ಕೆ.ಎಂ. ಅಶ್ರಫ್ ಭಾರೀ ಮುನ್ನಡೆ ಸಾಧಿಸಿದ್ದಾರೆ.
8ನೇ ಸುತ್ತಿನ ಅಂತ್ಯಕ್ಕೆ ಅಶ್ರಫ್ ಅವರು 52,298 ಮತಗಳನ್ನು ಪಡೆದು, ಪ್ರತಿಸ್ಪರ್ಧಿ ಎನ್‌ಡಿಎ ಅಭ್ಯರ್ಥಿ ಕೆ. ಸುರೇಂದ್ರನ್ (ಬಿಜೆಪಿ) ಅವರಿಗಿಂತ 20,703 ಮತಗಳ ಮುನ್ನಡೆ ಹೊಂದಿದ್ದಾರೆ. ಸುರೇಂದ್ರನ್ ಅವರಿಗೆ ಈವರೆಗೆ 31,595 ಮತಗಳು ಲಭಿಸಿವೆ.
ಇನ್ನೊಂದೆಡೆ, ಎಲ್‌ಡಿಎಫ್ ಅಭ್ಯರ್ಥಿ ಕೆ.ಆರ್. ಜಯಾನಂದ ಅವರು 8,311 ಮತಗಳನ್ನಷ್ಟೇ ಪಡೆದಿದ್ದಾರೆ.
ಮತ ಎಣಿಕೆ ಪ್ರಕ್ರಿಯೆ ಇನ್ನೂ ಮುಂದುವರಿದಿದೆ.ಮಂಜೇಶ್ವರದಲ್ಲಿ














