ಪುತ್ತೂರು, ಜೂನ್ 1: ಇಲ್ಲಿನ ಕೂರ್ನಡ್ಕ  ಆರಾಧ್ಯ ಲೇಔಟ್ ನಿವಾಸಿ, ಚಿನ್ನದ ಕಸೂತಿ ಕೆಲಸಗಾರ ಭಾಸ್ಕರ್ ಆಚಾರ್ಯ (35) ಅವರು ಭಾನುವಾರ ಹೃದಯಾಘಾತದಿಂದ ನಿಧನರಾದರು.
ಮೂಲತಃ ನಿಡ್ನಳ್ಳಿ ನಿವಾಸಿಯಾಗಿದ್ದ ಭಾಸ್ಕರ್ ಆಚಾರ್ಯ ಅವರಿಗೆ ಭಾನುವಾರ ಬೆಳಿಗ್ಗೆ ತೀವ್ರ ಎದೆನೋವು ಕಾಣಿಸಿಕೊಂಡಿತ್ತು. ತಕ್ಷಣ ಅವರನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ ಎಂದು ಕುಟುಂಬ ಮೂಲಗಳು ತಿಳಿಸಿವೆ.
ಭಾಸ್ಕರ್ ಆಚಾರ್ಯ ಅವರು ಈ ಹಿಂದೆ ಹಿಂದೂ ಜಾಗರಣ ವೇದಿಕೆಯ ಪುತ್ತೂರು ನಗರ ಸಂಚಾಲಕರಾಗಿ ಕಾರ್ಯನಿರ್ವಹಿಸಿದ್ದು, ಸಂಘಟನಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.
ಮೃತರು ಪತ್ನಿ ರಕ್ಷಿತಾ, ತಾಯಿ ಸುನಂದಾ, ಓರ್ವ ಸಹೋದರ ಹಾಗೂ ಮೂವರು ಸಹೋದರಿಯರನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *

Join WhatsApp Group
error: Content is protected !!