ಪುತ್ತೂರು, ಜೂ. 21: ದರ್ಬೆಯಲ್ಲಿರುವ ನಯಾ ಚಪ್ಪಲ್ ಬಜಾರ್ ವತಿಯಿಂದ ಗ್ರಾಹಕರಿಗಾಗಿ ಆರಂಭಿಸಿರುವ ‘ನಮ್ಮ ಪ್ರಥಮ ಮಹಡಿಗೆ ಸಂದರ್ಶಿಸಿ, ದಿನಾಲೂ ಬಹುಮಾನ ವಿಜೇತರಾಗಿ’ ಎಂಬ ವಿಶೇಷ ಯೋಜನೆಗೆ ಶನಿವಾರ ಚಾಲನೆ ನೀಡಲಾಯಿತು.
ಗ್ರಾಹಕರ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಮಳಿಗೆಯ ಪ್ರಥಮ ಮಹಡಿಯಲ್ಲಿ ಹೊಸ ಸಂಗ್ರಹಗಳನ್ನು ವಿಸ್ತರಿಸಲಾಗಿದ್ದು, ಇದರ ಅಂಗವಾಗಿ ಈ ವಿಶೇಷ ಬಹುಮಾನ ಯೋಜನೆಯನ್ನು ಆರಂಭಿಸಲಾಗಿದೆ.
ಯೋಜನೆಯಡಿ ಪ್ರಥಮ ಮಹಡಿಗೆ ಭೇಟಿ ನೀಡುವ ಗ್ರಾಹಕರಿಗೆ ಪ್ರತಿದಿನ ಅದೃಷ್ಟ ಚೀಟಿ (ಡ್ರಾ) ಮೂಲಕ ಬಹುಮಾನ ನೀಡಲಾಗುತ್ತಿದೆ. ಮೊದಲ ದಿನದ ಡ್ರಾದಲ್ಲಿ ಮನಸ್ವಿ ದರ್ಬೆ, ಪುತ್ತೂರು ಅವರು ಪ್ರಥಮ ವಿಜೇತರಾಗಿ ಆಯ್ಕೆಯಾಗಿದ್ದಾರೆ.
ಡ್ರಾವನ್ನು ಸಂಸ್ಥೆಯ ಗ್ರಾಹಕರಾದ ಮಾಸ್ಟರ್ ಇಲಾನ್ ಮುಡಿಪು ಅವರು ನಡೆಸಿಕೊಟ್ಟರು. ಮುಂದಿನ ದಿನಗಳಲ್ಲಿಯೂ ಇದೇ ರೀತಿಯಲ್ಲಿ ಪ್ರತಿದಿನ ಅದೃಷ್ಟಶಾಲಿ ಗ್ರಾಹಕರನ್ನು ಆಯ್ಕೆ ಮಾಡಿ ಬಹುಮಾನ ವಿತರಿಸಲಾಗುವುದು ಎಂದು ನಯಾ ಚಪ್ಪಲ್ ಬಜಾರ್‌ನ ಮಾಲಕರಾದ ಎಂ.ಜಿ. ರಫೀಕ್ ತಿಳಿಸಿದ್ದಾರೆ.
ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡಿ ಯೋಜನೆಯ ಸದುಪಯೋಗ ಪಡೆದುಕೊಳ್ಳುವಂತೆ ಅವರು ಮನವಿ ಮಾಡಿದ್ದಾರೆ.







