ಮಂಗಳೂರು, ಜೂನ್ 21: ದಕ್ಷಿಣ ಕನ್ನಡ, ಉಡುಪಿ ಹಾಗೂ ಕಾಸರಗೋಡು ಜಿಲ್ಲೆಗಳನ್ನು ಒಳಗೊಂಡ ಜಿಲ್ಲಾ ಕಂಬಳ ಸಮಿತಿಯ ಸಭೆ ಭಾನುವಾರ ಮೂಡುಬಿದಿರೆಯಲ್ಲಿ ನಡೆಯಿತು. ಸಭೆಯಲ್ಲಿ ಮೂಡುಬಿದಿರೆ ಹೊಸಬೆಟ್ಟು ನಿವಾಸಿ ಚಂದ್ರಹಾಸ ಸಾಧು ಸನಿಲ್ ಅವರನ್ನು ಜಿಲ್ಲಾ ಕಂಬಳ ಸಮಿತಿಯ ನೂತನ ಅಧ್ಯಕ್ಷರಾಗಿ ಆಯ್ಕೆ ಮಾಡಲಾಯಿತು.
ಈ ವೇಳೆ 2026-27ನೇ ಸಾಲಿನ ಕಂಬಳ ಸೀಸನ್‌ನ ವೇಳಾಪಟ್ಟಿಯನ್ನು ಸಮಿತಿ ಪ್ರಕಟಿಸಿದೆ. ಈ ಬಾರಿಯ ವಿಶೇಷವೆಂದರೆ, ಸಾಂಸ್ಕೃತಿಕ ರಾಜಧಾನಿ ಮೈಸೂರು ನಗರದಲ್ಲಿ ಮೊದಲ ಬಾರಿಗೆ ಕಂಬಳ ಆಯೋಜಿಸಲು ತೀರ್ಮಾನಿಸಲಾಗಿದೆ. ದಸರಾ ಉತ್ಸವದ ಅಂಗವಾಗಿ ಈ ಕಂಬಳ ನಡೆಯಲಿದೆ ಎಂದು ತಿಳಿಸಲಾಗಿದೆ.
2026-27ರ ಕಂಬಳ ಕೂಟಗಳ ವೇಳಾಪಟ್ಟಿ
ಪಣಿಪಿಲ – ನವೆಂಬರ್ 7
ಸಾಣೂರು – ನವೆಂಬರ್ 14
ಕೊಡಂಗೆ – ನವೆಂಬರ್ 21
ಕಕ್ಯಪದವು – ನವೆಂಬರ್ 28
ಹೊಕ್ಕಾಡಿಗೋಳಿ – ಡಿಸೆಂಬರ್ 5
ಬಾರಾಡಿಬೀಡು – ಡಿಸೆಂಬರ್ 12
ಮಂಗಳೂರು – ಡಿಸೆಂಬರ್ 19
ಮೂಲ್ಕಿ – ಡಿಸೆಂಬರ್ 26
ಬಳ್ಳಮಂಜ – ಡಿಸೆಂಬರ್ 27
ಮಿಯ್ಯಾರು – ಜನವರಿ 2
ನರಿಂಗಾನ – ಜನವರಿ 9
ಅಡ್ಡೆ – ಜನವರಿ 16
ಮೂಡುಬಿದಿರೆ – ಜನವರಿ 23
ಪುತ್ತೂರು – ಜನವರಿ 30
ಐಕಳ – ಫೆಬ್ರವರಿ 6
ಜಪ್ಪಿನಮೊಗರು – ಫೆಬ್ರವರಿ 13
ವಾಮಂಜೂರು – ಫೆಬ್ರವರಿ 20
ಎರ್ಮಾಳ್ – ಫೆಬ್ರವರಿ 27
ಬಂಟ್ವಾಳ – ಮಾರ್ಚ್ 6
ಬಂಗಾಡಿ – ಮಾರ್ಚ್ 13
ವೇಣೂರು – ಮಾರ್ಚ್ 20
ಉಪ್ಪಿನಂಗಡಿ – ಮಾರ್ಚ್ 27
ಗುರುಪುರ – ಏಪ್ರಿಲ್ 3
ಬಳಕುಂಜೆ – ಏಪ್ರಿಲ್ 10
ಹರೇಕಳ – ಏಪ್ರಿಲ್ 17
ಬಡಬೆಟ್ಟು – ಏಪ್ರಿಲ್ 24
ಕಂಬಳ ಪ್ರಿಯರಲ್ಲಿ ಈಗಾಗಲೇ ಹೊಸ ಸೀಸನ್‌ ಕುರಿತು ಕುತೂಹಲ ಮೂಡಿದ್ದು, ಮೈಸೂರಿನಲ್ಲಿ ನಡೆಯಲಿರುವ ಐತಿಹಾಸಿಕ ಕಂಬಳ ವಿಶೇಷ ಆಕರ್ಷಣೆಯಾಗಲಿದೆ.

Leave a Reply

Your email address will not be published. Required fields are marked *

Join WhatsApp Group
error: Content is protected !!