ಉಪ್ಪಿನಂಗಡಿ: ಬೆಳ್ತಂಗಡಿ ತಾಲೂಕಿನ ಕರಾಯ ಗ್ರಾಮದ ಪೆಟ್ರೋಲ್ ಬಂಕ್ ಬಳಿ ಸ್ಕೂಟರ್‌ಗೆ ಕಾರು ಅಡ್ಡಗಟ್ಟಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆ ಹಾಕಿದ ಆರೋಪದಡಿ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಕರಾಯ ಗ್ರಾಮದ ಕೆ.ಎಸ್. ಅಬ್ದುಲ್ಲಾ (65) ಅವರು ನೀಡಿದ ದೂರಿನಂತೆ, ಜೂನ್ 25ರಂದು ಸಂಜೆ 6 ಗಂಟೆ ಸುಮಾರಿಗೆ ಪೆಟ್ರೋಲ್ ಬಂಕ್‌ನಲ್ಲಿ ಸ್ಕೂಟರ್‌ಗೆ ಪೆಟ್ರೋಲ್ ಹಾಕಿಸಿಕೊಂಡು ಹೊರಡುತ್ತಿದ್ದ ವೇಳೆ, ಪರಿಚಯದ ಕರಾಯ ನಿವಾಸಿ ಚರಣ್ ಅವರು ಇನ್ನೋವಾ ಕಾರಿನಲ್ಲಿ ಬಂದು ಸ್ಕೂಟರ್‌ಗೆ ಅಡ್ಡಲಾಗಿ ಕಾರು ನಿಲ್ಲಿಸಿದ್ದಾರೆ ಎನ್ನಲಾಗಿದೆ. ಅಲ್ಲದೆ ಕಾರನ್ನು ಹಿಂದಕ್ಕೆ–ಮುಂದಕ್ಕೆ ಚಲಾಯಿಸಿ ದಾರಿ ಬಿಡದೆ ತೊಂದರೆ ನೀಡಿದ್ದು, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.ತಮ್ಮಿಂದ ತಪ್ಪಿಸಿಕೊಂಡು ತೆರಳುತ್ತಿದ್ದ ಅಬ್ದುಲ್ಲಾ ಅವರನ್ನು ಆರೋಪಿ ಬೆನ್ನಟ್ಟಿಕೊಂಡು ಹೋಗಿ ಬೆದರಿಕೆ ಹಾಕಿದ್ದು, ಜೀವಭಯದಿಂದ ಮನೆಗೆ ತೆರಳಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.ಈ ಸಂಬಂಧ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಅ.ಕ್ರ. 95/2026 ದಾಖಲಿಸಿಕೊಂಡು, ಭಾರತೀಯ ನ್ಯಾಯ ಸಂಹಿತೆ (BNS)-2023ರ ಕಲಂ 126(2), 352 ಹಾಗೂ 351(2)ರಡಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Leave a Reply

Your email address will not be published. Required fields are marked *

Join WhatsApp Group
error: Content is protected !!