ಪುತ್ತೂರು: ರೋಟರಿ ಕ್ಲಬ್ ಪುತ್ತೂರು ವತಿಯಿಂದ, ಕೆ.ವಿ.ಜಿ. ದಂತ ವೈದ್ಯಕೀಯ ಕಾಲೇಜು, ಸುಳ್ಯ ಇವರ ಸಹಯೋಗದಲ್ಲಿ ಉಚಿತ ದಂತ ಚಿಕಿತ್ಸಾ ಶಿಬಿರವನ್ನು ಜುಲೈ 13ರಂದು (ಸೋಮವಾರ) ಆಯೋಜಿಸಲಾಗಿದೆ.ಶಿಬಿರವು ಬೆಳಿಗ್ಗೆ 9.30ರಿಂದ ಮಧ್ಯಾಹ್ನ 3 ಗಂಟೆಯವರೆಗೆ ಪುತ್ತೂರು ಪಾಲಿಕ್ಲಿನಿಕ್ ಆವರಣ, ಮಹಾವೀರ ವೆಂಚರ್ಸ್, ಪುತ್ತೂರಿನಲ್ಲಿ ನಡೆಯಲಿದೆ.ಭಾರತೀಯ ದಂತ ವೈದ್ಯಕೀಯ ಸಂಘ (ಐಡಿಎ), ಪುತ್ತೂರು ಘಟಕವು ಶಿಬಿರಕ್ಕೆ ಸಹಕಾರ ನೀಡಲಿದೆ. ಸಾರ್ವಜನಿಕರು ಶಿಬಿರದ ಪ್ರಯೋಜನ ಪಡೆದುಕೊಳ್ಳುವಂತೆ ರೋಟರಿ ಕ್ಲಬ್ ಪುತ್ತೂರು ಪ್ರಕಟಣೆಯಲ್ಲಿ ತಿಳಿಸಿದೆ.ಹೆಚ್ಚಿನ ಮಾಹಿತಿಗೆ 8792493794 ಸಂಪರ್ಕಿಸಬಹುದು.







