ಸುಳ್ಯ: ಕರಾವಳಿ ಭಾಗದ ಆಹಾರಪ್ರಿಯರಿಗಾಗಿ ‘ದಿ ರಿದಾನ್ ಮಂದಿ’ ಫ್ಯಾಮಿಲಿ ರೆಸ್ಟೋರೆಂಟ್‌ನ ನೂತನ ಶಾಖೆ ಸೋಮವಾರ (ಜು.13) ಸುಳ್ಯದ ಗಾಂಧಿನಗರದ ಮುಖ್ಯರಸ್ತೆಯಲ್ಲಿ ಉದ್ಘಾಟನೆಯಾಗಲಿದೆ.
ಸಂಜೆ 4.30ಕ್ಕೆ ನಡೆಯುವ ಉದ್ಘಾಟನಾ ಸಮಾರಂಭದಲ್ಲಿ ಗಣ್ಯರು ಭಾಗವಹಿಸಲಿದ್ದು, ಬಳಿಕ ಸಾರ್ವಜನಿಕರಿಗೆ ರೆಸ್ಟೋರೆಂಟ್ ಸೇವೆ ಆರಂಭವಾಗಲಿದೆ. AHR Group ಪ್ರಾಯೋಜಕತ್ವದಲ್ಲಿ ಉದ್ಯಮಿಗಳಾದ ಮುಹಮ್ಮದ್ ಶರೀಫ್ (ಆಸಿಫ್), ಅಬ್ದುಲ್ ಹಮೀದ್ ಹಾಗೂ ಅಬ್ದುಲ್ ರಶೀದ್ ಅವರ ಮಾಲಕತ್ವದಲ್ಲಿ ಈ ರೆಸ್ಟೋರೆಂಟ್ ಕಾರ್ಯನಿರ್ವಹಿಸುತ್ತಿದೆ.
2020ರಲ್ಲಿ ಮೆಲ್ಕಾರ್‌ನಲ್ಲಿ ಮೊದಲ ಶಾಖೆ ಆರಂಭಿಸಿದ್ದ ‘ದಿ ರಿದಾನ್ ಮಂದಿ’ 2025ರಲ್ಲಿ ಪುತ್ತೂರು ತಾಲೂಕಿನ ಸಂಪ್ಯದಲ್ಲಿ ಎರಡನೇ ಶಾಖೆಯನ್ನು ಆರಂಭಿಸಿತ್ತು. ಇದೀಗ ಸುಳ್ಯದಲ್ಲಿ ಮೂರನೇ ಶಾಖೆ ಆರಂಭಿಸುವ ಮೂಲಕ ತನ್ನ ಸೇವಾ ವ್ಯಾಪ್ತಿಯನ್ನು ವಿಸ್ತರಿಸಿದೆ.
ಚಿಕನ್ ಮಂದಿ, ಮಟನ್ ಮಂದಿ ಸೇರಿದಂತೆ ಅರೇಬಿಯನ್ ಸಾಂಪ್ರದಾಯಿಕ ಖಾದ್ಯಗಳು, ವಿವಿಧ ಮಾಂಸಾಹಾರಿ ಹಾಗೂ ಸಸ್ಯಾಹಾರಿ ಭಕ್ಷ್ಯಗಳನ್ನು ಅನುಭವೀ ಬಾಣಸಿಗರು ನೈಸರ್ಗಿಕ ಮಸಾಲೆಗಳು ಮತ್ತು ಗುಣಮಟ್ಟದ ಪದಾರ್ಥಗಳಿಂದ ತಯಾರಿಸಲಿದ್ದಾರೆ ಎಂದು ಸಂಸ್ಥೆ ತಿಳಿಸಿದೆ.
ಕುಟುಂಬ ಸಮೇತ ಊಟಕ್ಕೆ ಅನುಕೂಲವಾಗುವ ಆಸನ ವ್ಯವಸ್ಥೆ, ವಿಶೇಷ ಮಂದಿ ಮಜ್ಲಿಸ್‌, ಮಿನಿ ಪಾರ್ಟಿ ಹಾಲ್ ಹಾಗೂ ಹೋಮ್ ಡೆಲಿವರಿ ಸೌಲಭ್ಯವೂ ರೆಸ್ಟೋರೆಂಟ್‌ನಲ್ಲಿ ಲಭ್ಯವಿದೆ. ಗುಣಮಟ್ಟದ, ಕಲಬೆರಕೆಯಿಲ್ಲದ ಸಾಂಪ್ರದಾಯಿಕ ಆಹಾರವನ್ನು ಗ್ರಾಹಕರಿಗೆ ಒದಗಿಸುವುದರ ಜೊತೆಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದು ಸಂಸ್ಥೆಯ ಉದ್ದೇಶವಾಗಿದೆ ಎಂದು ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.
ಹೆಚ್ಚಿನ ಮಾಹಿತಿಗಾಗಿ 78997 74133 ಸಂಖ್ಯೆಯನ್ನು ಸಂಪರ್ಕಿಸಬಹುದು ಎಂದು ಸಂಸ್ಥೆ ತಿಳಿಸಿದೆ.

Leave a Reply

Your email address will not be published. Required fields are marked *

Join WhatsApp Group
error: Content is protected !!