ಪುತ್ತೂರು: ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್‌) ಹಿರಿಯ ಕಾರ್ಯಕರ್ತ ನೀರ್ಕಜೆ ಜಯಶ್ಯಾಮ್ ಅವರ ಧರ್ಮಪತ್ನಿ ಹಾಗೂ ಪುಣಚ ಕೋ-ಆಪರೇಟಿವ್ ಸೊಸೈಟಿಯ ಮಾಜಿ ನಿರ್ದೇಶಕಿ ಶ್ರೀಮತಿ ಭಾರತಿ (54) ಅವರು ಶುಕ್ರವಾರ ಮುಂಜಾನೆ ಹೃದಯಾಘಾತದಿಂದ ನಿಧನರಾದರು.ಪುಣಚ ಗ್ರಾಮದ ಅಜ್ಜಿನಡ್ಕ ಸಮೀಪದ ನೀರ್ಕಜೆಯಲ್ಲಿ ಕುಟುಂಬದೊಂದಿಗೆ ವಾಸವಾಗಿದ್ದ ಭಾರತಿಯವರಿಗೆ ಶುಕ್ರವಾರ ಬೆಳಗ್ಗೆ ದಿಢೀರ್ ಹೃದಯಾಘಾತ ಸಂಭವಿಸಿತು. ಕೂಡಲೇ ಚಿಕಿತ್ಸೆಗಾಗಿ ಕರೆದೊಯ್ದರೂ ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದರು.ಮೃತರು ಪತಿ ಜಯಶ್ಯಾಮ್, ಪುತ್ರ ಅಜೇಯ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *

Join WhatsApp Group
error: Content is protected !!