ಪುತ್ತೂರು: ಸಾಲ್ಮರದ ಸೆಯ್ಯದ್ ಮಲೆ ಜುಮಾ ಮಸೀದಿ ಹಾಗೂ ಮದ್ರಸ ವಠಾರದಲ್ಲಿ ಸೆಪ್ಟೆಂಬರ್ 3ರಂದು (ಗುರುವಾರ) ಉಲಮಾ ಸಂಗಮ ಕಾರ್ಯಕ್ರಮ ನಡೆಯಲಿದೆ.ಮಧ್ಯಾಹ್ನ 1 ಗಂಟೆಗೆ ಧ್ವಜಾರೋಹಣ, 1.30ಕ್ಕೆ ಕೂಟ್ ಝಿಯಾರತ್ ನಡೆಯಲಿದ್ದು, ಮಧ್ಯಾಹ್ನ 2 ಗಂಟೆಗೆ ಉಲಮಾ ಸಂಗಮ ಕಾರ್ಯಕ್ರಮ ಆರಂಭಗೊಳ್ಳಲಿದೆ.ಅಲ್ ಹಾಜ್ ಸಯ್ಯದ್ ಮುಹಮ್ಮದ್ ತಂಜಳ್ ಸಾಲ್ಮರ ಅವರು ದುವಾಶೀರ್ವಚನ ನೀಡಲಿದ್ದು, ಉಸ್ತಾದ್ ಅಲ್-ಹಾಜ್ ಉಮರ್ ದಾರಿಮಿ ಸಾಲ್ಮರ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.ಎಸ್‌ಜೆಎಂ ಸಾಲ್ಮರ ಅಧ್ಯಕ್ಷ ಡಾ. ಸಂಶುದ್ದೀನ್ ಸಾಲ್ಮರ, ಅಲ್ ಹಾಜ್ ಅಬ್ದುಲ್ ರಝಾಕ್ ಮುಸ್ಲಿಯಾರ್ ಸಾಲ್ಮರ ಹಾಗೂ ಅಹಮದ್ ಮುಸ್ಲಿಯಾರ್ ಸಾಲ್ಮರ ಸೇರಿದಂತೆ ಗಣ್ಯರು ಉಪಸ್ಥಿತರಿರುವರು.ಜಮಾಅತ್ ಕಮಿಟಿ ಸೆಯ್ಯದ್ ಮಲೆ ಸಾಲ್ಮರ ಹಾಗೂ ಮಿಲಾದ್ ಸಮಿತಿ ಸೆಯ್ಯದ್ ಮಲೆ ಸಾಲ್ಮರ ವತಿಯಿಂದ ಕಾರ್ಯಕ್ರಮಕ್ಕೆ ಸರ್ವರಿಗೂ ಆದರದ ಸ್ವಾಗತ ಕೋರಲಾಗಿದೆ.

Leave a Reply

Your email address will not be published. Required fields are marked *

Join WhatsApp Group
error: Content is protected !!