ಪುತ್ತೂರು: ಜರ್ಮನಿಯ ಬರ್ಲಿನ್‌ನಲ್ಲಿರುವ ಶ್ರೀ ಗಣೇಶ ಹಿಂದೂ ಟೆಂಪಲ್‌ನ ಗಣೇಶನ ಮೂರ್ತಿಗೆ ಪುತ್ತೂರಿನ ಕೋರ್ಟ್ ರಸ್ತೆಯಲ್ಲಿರುವ ಡಿ. ಶಿವ ಭಟ್ ಜ್ಯುವೆಲ್ಲರ್ಸ್‌ನಲ್ಲಿ ವಿಶೇಷ ವಿನ್ಯಾಸದ ರಜತ ಕಿರೀಟವನ್ನು ತಯಾರಿಸಲಾಗಿದೆ.ಶ್ಯಾಮಲಾ ನಾಯಕ್ ಪುಣಚ ಹಾಗೂ ಕುಟುಂಬದವರ ಸೇವಾರ್ಥವಾಗಿ ಈ ರಜತ ಕಿರೀಟವನ್ನು ತಯಾರಿಸಲಾಗಿದ್ದು, ಸಂಸ್ಥೆಯ ನುರಿತ ಕರಕುಶಲ ಕರ್ಮಿಗಳು ಆರು ತಿಂಗಳ ಕಾಲ ಪರಿಶ್ರಮಿಸಿ ಕಿರೀಟಕ್ಕೆ ರೂಪ ನೀಡಿದ್ದಾರೆ.ಸಿದ್ಧ ವಿನ್ಯಾಸಕ್ಕೆ ಸೀಮಿತವಾಗದೆ, ಭಕ್ತರ ಭಕ್ತಿ ಮತ್ತು ಆರಾಧನಾ ಭಾವನೆಗೆ ಅನುಗುಣವಾಗಿ ಕಿರೀಟದ ವಿನ್ಯಾಸ ರೂಪಿಸಲಾಗಿದೆ. ಬೆಳ್ಳಿಯ ಕರಕುಶಲತೆ, ಸೂಕ್ಷ್ಮ ಅಲಂಕಾರಿಕ ವಿವರಗಳು ಹಾಗೂ ಅಂತಿಮ ರೂಪ ನೀಡುವವರೆಗಿನ ಪ್ರತಿಯೊಂದು ಹಂತದಲ್ಲೂ ತಾಳ್ಮೆ, ನಿಖರತೆ ಮತ್ತು ಅನುಭವ ಮೇಳೈಸಿದೆ.ಈ ರಜತ ಕಿರೀಟ ಕೇವಲ ಬೆಳ್ಳಿಯ ಕಲಾಕೃತಿಯಾಗಿರದೆ, ಪುತ್ತೂರಿನ ಕರಕುಶಲ ಪರಂಪರೆ, ಭಕ್ತಿಭಾವ, ವೈಯಕ್ತಿಕ ಕಲ್ಪನೆ ಹಾಗೂ ಮೂರು ತಲೆಮಾರುಗಳಿಂದ ಬೆಳೆದು ಬಂದ ಗ್ರಾಹಕರ ವಿಶ್ವಾಸದ ಪ್ರತೀಕವಾಗಿ ಮೂಡಿಬಂದಿದೆ.ಶತಮಾನದ ಹೊಸ್ತಿಲಲ್ಲಿ ಡಿ. ಶಿವ ಭಟ್ ಜ್ಯುವೆಲ್ಲರ್ಸ್2027ರಲ್ಲಿ ಶತಮಾನೋತ್ಸವ ಆಚರಿಸಲಿರುವ ಡಿ. ಶಿವ ಭಟ್ ಜ್ಯುವೆಲ್ಲರ್ಸ್, ಪುತ್ತೂರಿನ ಚಿನ್ನ ಮತ್ತು ಬೆಳ್ಳಿ ಆಭರಣಗಳ ವ್ಯಾಪಾರ ಹಾಗೂ ಕರಕುಶಲ ಪರಂಪರೆಯೊಂದಿಗೆ ಬೆಳೆದುಬಂದ ಸಂಸ್ಥೆಯಾಗಿದೆ. ಸಂಸ್ಥಾಪಕ ಡಿ. ಶಿವ ಭಟ್ ಅವರ ಬಳಿಕ ಅವರ ಪುತ್ರ ಗೋವಿಂದ ಭಟ್ ಜವಾಬ್ದಾರಿ ವಹಿಸಿಕೊಂಡರು. ಗ್ರಾಹಕರ ವಿಶ್ವಾಸವನ್ನು ಮೂಲ ಮೌಲ್ಯವಾಗಿ ಮುಂದುವರಿಸಿಕೊಂಡು ಬಂದ ಸಂಸ್ಥೆ, ಇದೀಗ ಮೂರನೇ ತಲೆಮಾರಿನ ಈಶ್ವರ ಮುರಳಿ ಅವರ ನೇತೃತ್ವದಲ್ಲಿ ಪರಂಪರೆಯೊಂದಿಗೆ ಹೊಸ ಕಾಲದ ಅಗತ್ಯಗಳಿಗೆ ಹೊಂದಿಕೊಳ್ಳುತ್ತಿದೆ.ಭಕ್ತಿಯ ಫಲವಾಗಿ ಮೂಡಿದ ಕಿರೀಟಬರ್ಲಿನ್‌ನ ಶ್ರೀ ಗಣೇಶ ಹಿಂದೂ ಟೆಂಪಲ್‌ಗಾಗಿ ಶ್ಯಾಮಲಾ ನಾಯಕ್ ಪುಣಚ ಹಾಗೂ ಕುಟುಂಬ ನೀಡಿದ ಕಿರೀಟದ ಆರ್ಡರ್ ವೈಯಕ್ತಿಕ ಕಲ್ಪನೆ ಮತ್ತು ಭಕ್ತಿಯ ಫಲವಾಗಿದೆ. ಗಣಪತಿ ಆರಾಧನೆಯೊಂದಿಗೆ ಬೆಸೆದುಕೊಂಡಿರುವ ಭಕ್ತಿಭಾವವನ್ನು ಗಮನದಲ್ಲಿಟ್ಟುಕೊಂಡು ಕಿರೀಟದ ವಿನ್ಯಾಸ, ಅಲಂಕಾರಿಕ ವಿವರಗಳು ಹಾಗೂ ಬೆಳ್ಳಿಯ ಕರಕುಶಲತೆಯನ್ನು ಸಮನ್ವಯಗೊಳಿಸಲಾಗಿದೆ.“ಇಂದು ಆಭರಣಗಳ ವಿನ್ಯಾಸ, ಗ್ರಾಹಕರ ಅಭಿರುಚಿ ಮತ್ತು ತಂತ್ರಜ್ಞಾನ ಬದಲಾಗಿದೆ. ಆದರೆ ಗ್ರಾಹಕರ ಮಾತನ್ನು ಆಲಿಸಿ, ಅವರ ಭಾವನೆ ಮತ್ತು ಅಗತ್ಯಕ್ಕೆ ತಕ್ಕಂತೆ ಆಭರಣವನ್ನು ರೂಪಿಸುವ ನಮ್ಮ ಮೂಲ ಮೌಲ್ಯದಲ್ಲಿ ಯಾವುದೇ ಬದಲಾವಣೆಯಾಗಿಲ್ಲ” ಎಂದು ಡಿ. ಶಿವ ಭಟ್ ಜ್ಯುವೆಲ್ಲರ್ಸ್‌ನ ಮಾಲಕ ಈಶ್ವರ ಮುರಳಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

Join WhatsApp Group
error: Content is protected !!