Oplus_131072

ಪುತ್ತೂರು: ಕಾರು ಮತ್ತು ಆಕ್ಟಿವಾ ನಡುವೆ ನಡೆದ‌ ಭೀಕರ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಇಂದಿರಾ ನಗರ ನಿವಾಸಿ ಗಣೇಶ್ ಅವರು ಮಂಗಳೂರು ಆಸ್ಪತ್ರೆಯಲ್ಲಿ ನಿಧಾನರಾದರು .

ಇವರು ಹೋಳಿಗೆ ವ್ಯಾಪಾರ ಮಾಡುತ್ತಿದ್ದು, ಪ್ರತಿ ಅಂಗಡಿ, ಮನೆಗಳಿಗೆ ತೆರಳಿ ಮಾರಾಟ ಮಾಡುತ್ತಿದ್ದರು. ಎಲ್ಲರಿಗೂ ಚಿರಪರಿಚಿತರಾಗಿದ್ದರು.

ಪುತ್ತೂರು ಕಡೆಗೆ ಹೋಗುತ್ತಿದ್ದ ಬ್ರೀಝಾ ಕಾರು ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಆಕ್ಟಿವಾಗೆ ವಿರುದ್ಧ ಧಿಕ್ಕಿಗೆ ಹೋಗಿ ಡಿಕ್ಕಿ ಹೊಡೆದಿತ್ತು. ಡಿಕ್ಕಿಯ ರಭಸಕ್ಕೆ ಆಕ್ಟಿವಾ ಸವಾರ ಆಕ್ಟಿವ ಸಮೇತ ರಸ್ತೆ ಬದಿಯ ಚರಂಡಿಗೆ ಎಸೆಯಪಟ್ಟಿದ್ದು ಗಂಭೀರ ಗಾಯಗೊಂಡಿದ್ದರು. ಕಾರು ಚಾಲಕನ ಅಜಾಗರೂಕತೆಗೆ ಆಕ್ರೋಶ ವ್ಯಕ್ತವಾಗಿದೆ.

2005ರವರೆಗೆ ಸುಮಾರು 17 ವರ್ಷ ಪುರುಷರಕಟ್ಟೆ ಉದಯಭಾಗ್ಯ ಹೊಟೇಲಿನಲ್ಲಿ ತಿಂಡಿ ತಯಾರಕರಾಗಿದ್ದರು. ನಂತರ ನವೀನ್ ಪ್ರಭು ಮಾಲಕತ್ವದ ಸಂಸ್ಥೆಯ ಹೋಳಿಗೆಯನ್ನು ಮೊದಲಿಗೆ ಕಾಲ್ನಡಿಗೆಯಲ್ಲಿ, ನಂತರ ದ್ವಿಚಕ್ರ ವಾಹನದಲ್ಲಿ ಮಾರಾಟ ಮಾಡುತ್ತಿದ್ದರು.

ಮೃತರು ಪತ್ನಿ, 1 ಗಂಡು ಹಾಗೂ ಹೆಣ್ಣು ಮಗಳನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *

Join WhatsApp Group
error: Content is protected !!