
ಸಕಲೇಶಪುರ: ಕಾಂಕ್ರೀಟ್ ರಸ್ತೆ ನಿರ್ಮಾಣಕ್ಕೆಂದು, ಮಳೆಯಲ್ಲೇ ಡಾಂಬರ್ ರಸ್ತೆ ಅಗೆದ ಪರಿಣಾಮ, ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ ಕೆಸರುಮಯವಾಗಿದ್ದು, ಮಂಗಳವಾರ ರಾತ್ರಿಯಿಂದಲೇ ಸಾವಿರಾರು ವಾಹನಗಳ ಸಂಚಾರಕ್ಕೆ ಅಡಚಣೆ ಉಂಟಾಗಿದೆ.
ಬುಧವಾರ ಆನೇಮಹಲ್‌ನಿಂದ ಸಕಲೇಶಪುರ ಕಡೆ ಹಾಗೂ ಆನೇಮಹಲ್‌ನಿಂದ ದೋಣಿಗಾಲ್ ಕಡೆಗೆ 5-6 ಕಿ.ಮೀ.ಉದ್ದಕ್ಕೆ ಸಾವಿರಾರು ವಾಹನಗಳು ಗಂಟೆಗಟ್ಟಲೆ ನಿಂತಿದ್ದವು.
ಹಾಸನದಿಂದ ಮಂಗಳೂರಿಗೆ ಹೋಗುತ್ತಿದ್ದ ಆಂಬುಲೆನ್ಸ್ ಕೂಡ ಮಾರ್ಗದ ಮಧ್ಯದಲ್ಲಿಯೇ ನಿಲ್ಲಬೇಕಾಯಿತು.
ಬುಧವಾರ ಬೆಳಿಗ್ಗೆ 9.30ಕ್ಕೆ ವಿದ್ಯಾರ್ಥಿಗಳು ಮಧ್ಯ ವಾರ್ಷಿಕ ಪರೀಕ್ಷೆಗೆ ಹಾಜರಾಗಬೇಕಾಗಿತ್ತು. ಆನೇಮಹಲ್‌ನಲ್ಲಿ ರಸ್ತೆ ಅವ್ಯವಸ್ಥೆಯಿಂದಾಗಿ ವಾಹನಗಳು ಮಾರ್ಗದ ಮಧ್ಯದಲ್ಲಿ ಸಾಲುಗಟ್ಟಿ ನಿಂತಿದ್ದರಿಂದ ವಿದ್ಯಾರ್ಥಿಗಳಲ್ಲಿ ಆತಂಕ ಹೆಚ್ಚಿತ್ತು. 9.30ಕ್ಕೆ ಶಾಲೆಗೆ ಹೋಗಬೇಕಾದ ಮಕ್ಕಳು, ಮಧ್ಯಾಹ್ನ 12 ಗಂಟೆಗೆ ತಲುಪಿದರು. ಅವ್ಯವಸ್ಥೆಯ ಬಗ್ಗೆ ಗೊತ್ತಿದ್ದರಿಂದ ತಡವಾಗಿ ಬಂದ ಮಕ್ಕಳನ್ನು ಪ್ರತ್ಯೇಕವಾಗಿ ಕೂರಿಸಿ, ಪರೀಕ್ಷೆ ಬರೆಸಿದ್ದಾಗಿ ತಿಳಿದು ಬಂದಿದೆ.
ಹಾಸನ-ಮಾರನಹಳ್ಳಿ ನಡುವೆ ಚತುಷ್ಪಥ ರಸ್ತೆ ಕಾಮಗಾರಿ ಪ್ರಗತಿಯಲ್ಲಿದ್ದು, ಆನೇಮಹಲ್ ಗ್ರಾಮದ ಬಳಿ ಮಂಗಳವಾರ ಮಧ್ಯಾಹ್ನದಿಂದ ಹೆದ್ದಾರಿಯನ್ನು ದೊಡ್ಡ ಯಂತ್ರಗಳಿಂದ ಬಗೆಯಲಾಗಿತ್ತು. ಒಂದು ಬದಿಯಲ್ಲಿ ರಸ್ತೆ ನಿರ್ಮಿಸಿ, ಮತ್ತೊಂದು ಬದಿಯಲ್ಲಿ ಸಂಚಾರಕ್ಕೆ ವ್ಯವಸ್ಥೆ ಮಾಡದೆ,ಮತ್ತೊಂದು ಬದಿಯಲ್ಲಿ ಸಂಚಾರಕ್ಕೆ ವ್ಯವಸ್ಥೆ ಮಾಡದೆ, ಇಡೀ ರಸ್ತೆಯನ್ನೇ ಅಗೆದಿರುವುದರಿಂದ ಮಳೆ ನೀರು ಸೇರಿ ಸಮಸ್ಯೆ ಉಂಟಾಗಿದೆ.
‘ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ಕಾಮಗಾರಿಯ ಗುತ್ತಿಗೆ ಪಡೆದಿರುವ ರಾಜ್‌ಕಮಲ್ ಬಿಲ್ಡರ್ಸ್‌ನವರ ಅವೈಜ್ಞಾನಿಕ ಕಾಮಗಾರಿಯೇ ಕಾರಣ’ ಎಂದು ವಾಹನ ಸವಾರರು ದೂರಿದ್ದಾರೆ.
ಶಾಸಕ ಸಿಮೆಂಟ್ ಮಂಜುಅವೈಜ್ಞಾನಿಕ ಕಾಮಗಾರಿಯಿಂದ ಜನರಿಗೆ ತೊಂದರೆ ನೀಡಿದ ಎಂಜಿನಿಯರ್‌ಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಜಿಲ್ಲಾಧಿಕಾರಿ ಎಸ್ಪಿಗೆ ಒತ್ತಾಯ ಮಾಡಿದ್ದೇನೆ. ಟಿ.ಪಿ.ಸುರೇಂದ್ರ ಕೆಸಗಾನಹಳ್ಳಿ ನಿವಾಸಿಮಲೆನಾಡು ಭಾಗಕ್ಕೆ ಯಾವ ಶಾಪವೋ ಗೊತ್ತಿಲ್ಲ ಚತುಷ್ಪಥ ಕಾಮಗಾರಿ 2017ರಿಂದ ಆರಂಭವಾಗಿದ್ದರೂ ಇನ್ನೂ ಶೇ.40 ಪೂರ್ಣಗೊಂಡಿಲ್ಲ







