ಜಿಲ್ಲಾ ರ‍್ಯಾಪಿಡ್ ಚೆಸ್ ಟೂರ್ನಮೆಂಟ್
ಹಿಮನೀಶ್ ಗೌಡ ಕೆ ದ್ವಿತೀಯ
ಪುತ್ತೂರು: ಅಂತರ ಜಿಲ್ಲಾ ರ‍್ಯಾಪಿಡ್ ಚೆಸ್ ಟೂರ್ನ್‌ಮೆಂಟ್ ಉಬಾರ್ ಚೆಸ್ ಟ್ರೋಫಿ ೨೦೨೪ ನ ೧೦ ವರ್ಷದೊಳಗಿನ ವಿಭಾಗದಲ್ಲಿ ಬನ್ನೂರು ನಿವಾಸಿ ಹಿಮನೀಶ್ ಗೌಡ ಕೆ ಅವರು ದ್ವಿತೀಯ ಸ್ಥಾನ ಪಡೆದಿದ್ದಾರೆ.


ಉಬಾರ್ ಚೆಸ್ ಅಕಾಡೆಮಿ ಪುತ್ತೂರು ಇದರ ವತಿಯಿಂದ ಮಾಯಿದೆ ದೇವುಸ್ ಸಮೂಹ ಸಂಸ್ಥೆಗಳು ಮತ್ತು ದಕ್ಷಿಣ ಕನ್ನಡ ಚೆಸ್ ಅಕಾಡಮಿ ಇದರ ಸಹಭಾಗಿತ್ವದಲ್ಲಿ ಪುತ್ತೂರು ಮಾಯಿದೆ ದೇವುಸ್ ಚರ್ಚ್ ಹಾಲ್‌ನಲ್ಲಿ ಅ.೪ರಂದು ನಡೆದ ಚದುರಂಗ ಸ್ಪರ್ಧೆಯ ೧೦ವರ್ಷದ ಒಳಗಿನ ಮಕ್ಕಳ ವಿಭಾಗದಲ್ಲಿ ಹಿಮನೀಶ್ ಗೌಡ ಕೆ ದ್ವಿತೀಯ ಸ್ಥಾನ ಪಡೆದಿದ್ದಾರೆ. ಇವರು ಅಂಬಿಕಾ ವಿದ್ಯಾಲಯದ ೪ನೇ ತರಗತಿ ವಿದ್ಯಾರ್ಥಿಯಾಗಿದ್ದು, ಬನ್ನೂರು ನಿವಾಸಿ ಲೋಕೇಶ್ ಗೌಡ ಮತ್ತು ಜಯಶೀಲ ದಂಪತಿ ಪುತ್ರ.

Leave a Reply

Your email address will not be published. Required fields are marked *

Join WhatsApp Group
error: Content is protected !!