
ಮೈಸೂರು: ಭಾವಿ ಪತ್ನಿಯನ್ನು ಕೊಂದು ನೇಣು ಹಾಕಿರುವ ಆರೋಪವೊಂದು ಮೈಸೂರು ಜಿಲ್ಲೆಯ ಎಚ್.ಡಿ.ಕೋಟೆ ತಾಲೂಕಿನ ಹಿರೇಹಳ್ಳಿ ಗ್ರಾಮದಲ್ಲಿ ಕೇಳಿ ಬಂದಿದೆ.
ಕವಿತಾ (20) ಕೊಲೆಯಾದ ದುರ್ದೈವಿ. ನಿರಂಜನ ಅಲಿಯಾಸ್ ಜಗ್ಗ ಎಂಬಾತನ ಮೇಲೆ ಕೊಲೆ ಆರೋಪವಿದೆ. ಮೃತ ಕವಿತಾಳಿಗೆ ಅಕ್ಟೋಬರ್ 21ಕ್ಕೆ ನಿರಂಜನ ಜೊತೆಗೆ ಮದುವೆ ದಿನಾಂಕ ನಿಗದಿಯಾಗಿತ್ತು.
ಕವಿತಾ ಪೋಷಕರು ಜಮೀನಿಗೆ ಹೋದಾಗ ನಿರಂಜನ ಮನೆಗೆ ಬಂದಿದ್ದ. ಈ ವೇಳೆ ಕವಿತಾಳೊಂದಿಗೆ ಜಗಳ ಮಾಡಿ ಕೊಲೆ ಮಾಡಿ ನೇಣು ಹಾಕಿ ಪರಾರಿಯಾಗಿದ್ದಾನೆ.
ಮನೆಯ ಹೆಂಚು ತೆಗೆದು ಓಡಿ ಹೋಗುವಾಗ ಗ್ರಾಮಸ್ಥರಿಂದ ತಡೆಯುವ ಯತ್ನ ನಡೆದಿದೆ. ನಂತರ ಆರೋಪಿಯು ಎಚ್.ಡಿ.ಕೋಟೆ ಅಂತರಸಂತೆ ಠಾಣೆಗೆ ತೆರಳಿ ಪೊಲೀಸರಿಗೆ ಶರಣಾಗಿದ್ದಾನೆ. ನಾನು ಕೊಲೆ ಮಾಡಿಲ್ಲ. ಜನರು ಹೊಡೆದು ಸಾಯಿಸಿ ಬಿಡುತ್ತಾರೆ ಎಂದು ಓಡಿ ಹೋದೆ ಅಷ್ಟೇ ಎಂದು ಪೊಲೀಸರ ಮುಂದೆ ಹೇಳಿದ್ದಾನೆ.
ಸದ್ಯ ಕವಿತಾ ಆತ್ಮಹತ್ಯೆ ಮಾಡಿಕೊಂಡಿದ್ದಾ ಅಥವಾ ಇದೊಂದು ಕೊಲೆಯಾ..? ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
