
ಪುತ್ತೂರು: ಪುತೂರಿನ ಪ್ರತಿಷ್ಠಿತ ಜವುಳಿ ಮಳಿಗೆ ಕೋರ್ಟ್‌ರಸ್ತೆಯ ರಾಧಾ’ಸ್ ಫ್ಯಾಮಿಲಿ ಶೋ.ರೂಂನಲ್ಲಿ ಮತ್ತೆ ವಿನೂತನ ಕೊಡುಗೆಗಳನ್ನು ಗ್ರಾಹಕರಿಗೆ ನೀಡುತ್ತಿದ್ದು ಜವುಳಿ ಖರೀದಿಗೆ ಅಮೋಘ ಡಿಸ್ಕೊಂಟ್‌ಗಳೊಂದಿಗೆ ಜವುಳಿ ಖರೀದಿಸಿ ಭರ್ಜರಿ ಬಹುಮಾನಗಳನ್ನು ಗೆಲ್ಲುವ ರಾಧಾ’ಸ್ ಉತ್ಸವವು ಅ.7ರಿಂದ ಪ್ರಾರಂಭಗೊಂಡಿದೆ.
ಕಳೆದ 29 ವರ್ಷಗಳಿಂದ ಪುತ್ತೂರಿನ ಜನತೆಗೆ ಜವುಳಿ ಉದ್ಯಮದಲ್ಲಿ ಮನೆ ಮಾತಮಾತಾಗಿರುವ ರಾಧಾ’ಸ್‌ನಲ್ಲಿ ಪ್ರತಿವರ್ಷ ಮಾನ್ಸೂನ್ ಮೇಳವನ್ನು ನಡೆಸುವ ಜೊತೆಗೆ ಗ್ರಾಹಕರಿಗೆ ಈ ಭಾರಿ ಮತ್ತಷ್ಟು ಕೊಡುಗಗಳನ್ನು ನೀಡಲು ಮುಂದಾಗಿದೆ. ಆಫರ್‌ಗಳ ಬಿಗ್‌ಬಾಸ್ ರಾಧಾಸ್ ಉತ್ಸವದಲ್ಲಿ ಶಾಫ್ & ವಿನ್ ವಿಶೇಷ ಕೊಡುಗೆಗಳನ್ನು ನೀಡುತ್ತುದೆ. ಜವುಳಿ ಖರೀದಿಗೆ ಶೇ.15 ರಿಯಾಯಿತಿಯೊಂದಿಗೆ ರೂ.3,999ರ ಜವುಳಿ ಖರೀದಿಗೆ ಗಿಫ್ಟ್ ಕೂಪನ್ ನೀಡಲಾಗುತ್ತಿದೆ. ಗ್ರಾಹಕರಿಗೆ ಪ್ರತಿವಾರ ಪ್ರಥಮ, ದ್ವಿತೀಯ. ತೃತೀಯ ಬಹುಮಾನಗಳ ಜೊತೆಗೆ 9 ಆಕರ್ಷಕ ಬಹುಮಾನಗಳು ಸೇರಿದಂತೆ 12 ಬಹುಮಾನಗಳನ್ನು ನೀಡಲಾಗುತ್ತಿದೆ. ಪ್ರತಿ ತಿಂಗಳು ಬಂಪರ್ ಡ್ರಾ ನಡೆಯಲಿದ್ದು ಟಿವಿಎಸ್ ಜ್ಯುಪಿಟರ್ ದ್ವಿಚಕ್ರ ವಾಹನ ಗೆಲ್ಲುವ ಅವಕಾಶವಿದೆ. ಈ ಕೊಡುಗೆಗಗಳ ಅ.7ರಿಂದ ಪ್ರಾರಂಭಗೊಂಡು ಡಿ.31ರ ತನಕ ದೊರೆಯಲಿದ್ದು ಗ್ರಾಹಕರು ಸದುಪಯೋಗ ಪಡೆದುಕೊಳ್ಳಬಹುದು.
ಪ್ರತಿ ದಿನ ಹೊಸ ಸಂಗ್ರಹ, ಕಡಿಮೆ ದರ:
ನೇರವಾಗಿ ಪ್ಯಾಕ್ಟರಿಯಿಂದ ಖರೀದಿಸಿದ ಉಡುಪುಗಳನ್ನು ಗ್ರಾಹಕರಿಗೆ ಕೈಗೆಟಕುವ ದರದಲ್ಲಿ ಮಾರಾಟ ಮಾಡಲಾಗುತ್ತಿದೆ. ಪ್ರತಿ ದಿನ ಹೊಸ ಹೊಸ ಸಂಗ್ರಹಗಳು ಮಳಿಗೆಯಲ್ಲಿ ಗ್ರಾಹಕರಿಗೆ ಲಭ್ಯವಿದೆ. ವಿನೂತನ ಶೈಲಿಯ, ಹೊಸ ಹೊಸ ವಿನ್ಯಾಸದ ಉಡುಪುಗಳು ಕಡಿಮೆ ಬೆಲೆಯಲ್ಲಿ ಲಭ್ಯವಿದ್ದು ಗ್ರಾಹಕರ ಕಣ್ಮನ ಸೆಳೆಯುತ್ತಿದೆ. ಸಾರಿ, ಚೂಡಿದಾರ್ ಪೀಸ್‌ಗಳು, ಕುರ್ತಿಸ್, ರೆಡಿಮೇಡ್ ಚೂಡಿದಾರ್‌ಗಳು, ನೈಟಿ, ಜಂಟ್ಸ್ ಪ್ಯಾಂಟ್-ಶರ್ಟ್ ಹಾಗೂ ಮಕ್ಕಳ ವೆಸ್ಟರ್ನ್ ಔಟ್‌ಫಿಟ್‌ಗಳು, ಪುರುಷರ ಎಲ್ಲಾ ರೀತಿಯ ಉಡುಪುಗಳು ಸೇರಿದಂತೆ ಎಲ್ಲಾ ಬಗೆಯ ಉಡುಪುಗಳ ಬೃಹತ್ ಸಂಗ್ರಹವಿದೆ. ಅನುಭವೀ ಸಿಬಂದಿಗಳಿಂದ ಗ್ರಾಹಕರ ಅಭೀಷ್ಟೆಗಳಿಗೆ ಅನುಗುಣವಾಗಿ ಮಳಿಗೆಯಲ್ಲಿ ಸಿಬ್ಬಂದಿಗಳು ನೀಡುತ್ತಿರುವ ಸೇವೆಯಿಂದಾಗಿ ಹೆಸರಾಂತ ಮಳಿಗೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಕೊಡುಗೆಗಳು ಸೀಮಿತ ದಿನಗಳ ತನಕ ಮಾತ್ರವೇ ಇದ್ದು ಗ್ರಾಹಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಸಂಸ್ಥೆಯ ಮ್ಹಾಲಕರು ತಿಳಿಸಿದ್ದಾರೆ.






