
ಮಹಾರಾಷ್ಟ್ರದ ಮಾಜಿ ಸಚಿವ ಮತ್ತು ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ (NCP) ನಾಯಕ ಬಾಬಾ ಸಿದ್ದಿಕಿ(Baba Siddique) ಹತ್ಯೆ ಪ್ರಕರಣದಲ್ಲಿ ಅರೆಸ್ಟ್ ಆಗಿರುವ ಆರೋಪಿ ಧರ್ಮರಾಜ್ ಎರಡು ತಿಂಗಳ ಹಿಂದೆ ಮನೆ ಬಿಟ್ಟಿದ್ದ ಎಂದು ಆತನ ತಾಯಿ ಮಾಹಿತಿ ನೀಡಿದ್ದಾರೆ.
ಘಟನೆ ಬಗ್ಗೆ ಆಘಾತ ವ್ಯಕ್ತಪಡಿಸಿರುವ ಧರ್ಮರಾಜ್ ಕಶ್ಯಪ್(19) ತಾಯಿ, ಕಳೆದ ಕೆಲವು ತಿಂಗಳಿಂದ ಮಗ ಏನು ಮಾಡುತ್ತಿದ್ದಾನೆ ಎಲ್ಲಿದ್ದಾನೆ ಎಂಬ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಪುಣೆಯಲ್ಲಿ ಕೆಲಸದಲ್ಲಿರುವುದಾಗಿ ಮಾತ್ರ ಹೇಳಿದ್ದ. ಅವನು ಪುಣೆಗೆ ತೆರಳಿದ ನಂತರ ಒಂದೇ ಒಂದು ಬಾರಿ ಫೋನ್‌ನಲ್ಲಿ ಮಾತನಾಡಿದ್ದೆ. ನನಗೆ ಇಷ್ಟು ಮಾತ್ರ ಗೊತ್ತು. ಇನ್ನು ಮುಂಬೈನಲ್ಲಿ ಏನಾಗುತ್ತಿದೆ ಎಂಬ ಬಗ್ಗೆ ಅರಿವಿಲ್ಲ ಎಂದು ಹೇಳಿದ್ದಾರೆ.
ಇನ್ನು ತಲೆಮರೆಸಿಕೊಂಡಿರುವ ಆರೋಪಿ ಹರ್ಯಾಣ ಮೂಲದ ಗುರ್ಮೇಲ್ ಸಿಂಗ್ ಕುಟುಂಬಸ್ಥರೂ ಇದೇ ರೀತಿ ಹೇಳಿದ್ದಾರೆ. ಆತ ಮುಂಬೈಗೆ ಕೆಲಸಕ್ಕೆಂದು ಹೋಗಿದ್ದಾನೆ. ಅಲ್ಲಿನ ಏನು ನಡೆಯುತ್ತಿದೆ ಎಂಬ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಹೋಳಿ ಸಂದರ್ಭದಲ್ಲಿ ಮನೆಗೆ ಬಂದಿದ್ದ. ಬರು ಬರುತ್ತಾ ನಮ್ಮ ಜತೆ ಫೋನ್‌ನಲ್ಲಿ ಮಾತನಾಡುವುದನ್ನೂ ನಿಲ್ಲಿಸಿದ್ದ. ಇನ್ನು ಮುಂದೆ ಅವನಿಗೂ ನಮಗೂ ಯಾವುದೇ ಸಂಬಂಧ ಇಲ್ಲ ಎಂದು ಆತನ ಅಜ್ಜಿ ಹೇಳಿದ್ದಾರೆ.
