ಉಪ್ಪಿನಂಗಡಿ; ಬೆಳ್ತಂಗಡಿ ತಾಲೂಕಿನ ಕಾಶಿಪಟ್ಣ ಎಂಬ ಗ್ರಾಮೀಣ ಪ್ರದೇಶದಲ್ಲಿ ನೂರಾರು ಮಕ್ಕಳಿಗೆ ಜ್ಞಾನ ಸುಧೆ ಹರಿಸುತ್ತಿರುವ  ಕರ್ನಾಟಕದ ಪ್ರತಿಷ್ಠಿತ ಧಾರ್ಮಿಕ- ಲೌಕಿಕ ಸಮನ್ವಯ ಶಿಕ್ಷಣ ಕೇಂದ್ರ ದಾರುನ್ನೂರು ಎಜುಕೇಶನ್ ಸೆಂಟರ್  ಸ್ಥಾಪನೆಯಾಗಿ ಹತ್ತು ವರ್ಷ ಪೂರ್ತಿ ಗೊಳಿಸಿದ ಹಾಗೂ ಪ್ರಥಮ ಸನದು ಪ್ರಧಾನ ಮಾಡುವ ಸಂಭ್ರಮವನ್ನು ಸಾರ್ವಜನಿಕವಾಗಿ ಹಂಚಿ ಕೊಳ್ಳುವ ಉದ್ದೇಶ ಇಟ್ಟು ಕೊಂಡು ಇದೇ ಬರುವ ನವಂಬರ್ 1ರಿಂದ 3 ತನಕ ಹಮ್ಮಿಕೊಳ್ಳಲಾಗಿರುವ ವೈವಿಧ್ಯಮಯ ಬೃಹತ್ ಕಾರ್ಯಕ್ರಮವನ್ನು ಐತಿಹಾಸಿಕ ಗೊಳಿಸುವ ಸಲುವಾಗಿ ನಾಡಿನಾದ್ಯಂತ ಪ್ರಚಾರ ಕಾರ್ಯಗಳು ಭರದಿಂದ ಸಾಗುತ್ತಿದ್ದು  ಇದರ ಭಾಗವಾಗಿ ಪ್ರಚಾರ ಜಾಥ ಉಪ್ಪಿನಂಡಿಗೆ ಆಗಮಿಸಿದಾಗ ಅದ್ದೂರಿಯ ಸ್ವಾಗತ ದೊರಕಿತು.
ಕೇಂದ್ರ ಜುಮಾ ಮಸೀದಿಯ ವಠಾರಕ್ಕೆ ತಲುಪಿದ ಜಾಥವನ್ನು ಸ್ವಾಗತಿಸಲಾಯಿತು.

ಜಿಲ್ಲಾ ಖಾಝಿ ಶೈಖುನಾ ತ್ವಾಖ ಅಹ್ಮದ್ ಮುಸ್ಲಿಯಾರ್ ರವರ ನೇತೃತ್ವದಲ್ಲಿ ಸುಸೂತ್ರವಾಗಿ ನಡೆದು ಬರುತ್ತಿರುವ ಈ ವಿಧ್ಯಾಕೇಂದ್ರವು ಸಮುದಾಯದ ಎಲ್ಲಾ ವರ್ಗದವರಿಗೂ ಉಚಿತವಾಗಿ ಶಿಕ್ಷಣ ನೀಡುತ್ತಿದ್ದು ಪ್ರತೀ ತಿಂಗಳು ಲಕ್ಷಾಂತರ ಖರ್ಚು ವೆಚ್ಚಗಳು ತಗಲುತ್ತಿದೆ.

ಸಾರ್ವಜನಿಕರ,ಉದಾರಿಗಳ,ಅನಿವಾಸಿಗಳ ಸಹಾಯ ಸಹಕಾರದೊಂದಿಗೆ ಸಂಸ್ಥೆಯು ಉನ್ನತ ಮಟ್ಟಕ್ಕೆ ಬೆಳೆದು ನಿಂತಿದ್ದು ಶಿಕ್ಷಣ ಪ್ರೇಮಿಗಳಾದ ಸಾರ್ವಜನಿಕರ ಗಮನ ಸೆಳೆಯುತ್ತಿದೆ.

ಇಂದು ಉಪ್ಪಿನಂಗಡಿಗೆ ಆಗಮಿಸಿದ ಜಾಥವನ್ನು ಸ್ವಾಗತಿಸಲು ಸ್ಥಳೀಯ ಉಸ್ತಾದರು,ಉಲಮಾಗಳು,ಉಮರಾಗಳು,ಯುವಕರು ಸೇರಿದಂತೆ ನೂರಾರು ಜ‌ನರು ಆಗಮಿಸಿದ್ದರು.
ಸ್ಥಳೀಯ ಖತೀಬ್ ಅಬ್ದುಲ್ ಸಲಾಂ ಪೈಝಿ,ಉಸ್ತಾದ್ ಎಸ್ ಬಿ ದಾರಿಮಿ,ಕರಾವಳಿ ಹಮೀದ್ ಮಾತನಾಡಿದರು.
ಎಚ್ ಯೂಸುಪ್ ,ಸಿದ್ದೀಖ್ ಮೇದರ ಬೆಟ್ಟು,ಯೂನಿಕ್ ರಹ್ಮಾನ್,ಹಾಜಿ ಇಬ್ರಾಹಿಂ ಅಗ್ನಾಡಿ ,ಇಸ್ಮಾಯಿಲ್ ತಂಙಳ್,ಶುಕೂರು ಮೈನಾ,ಕೂಟೇಲು ಮುಹಮ್ಮದ್,ಹಸೈನಾರ್ ಹಾಜಿ ಕೊಯಿಲ,ಆಶ್ರಫ್ ಹಾಜಿ ಪೆದ್ಮಲೆ,ಹಸೈನಾರಾಜಿ ಬಂಡಾಡಿ,ಮುಹೀನುದ್ದಿನ್ ಹುದವಿ,ಮುನೀರ್ ಎನ್ಮಾಡಿ ಮೊದಲಾದ ಹಲವಾರು ಗಣ್ಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

Join WhatsApp Group
error: Content is protected !!