
ಬೆಂಗಳೂರು : ಕ್ಷುಲ್ಲಕ ವಿಚಾರಕ್ಕೆ 19 ವರ್ಷದ ಯುವತಿಯೊಬ್ಬಳು ಶನಿವಾರ ಬೆಳಗ್ಗೆ ತನ್ನ ಮನೆಯಲ್ಲಿಯೇ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಾಮರಾಜಪೇಟೆಯಲ್ಲಿ ನಡೆದಿದೆ. 19 ವರ್ಷದ ಶ್ರಾವ್ಯ ಎಂಬ ಎರಡನೇ ವರ್ಷದ ಬಿಬಿಎ ವಿದ್ಯಾರ್ಥಿನಿ ತೀರಾ ಸಣ್ಣ ವಿಷಯಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಪೊಲೀಸ್ ವರದಿಗಳ ಪ್ರಕಾರ, ಶುಕ್ರವಾರ ರಾತ್ರಿ ಶ್ರಾವ್ಯ ತನ್ನ ಅಕ್ಕನ ಜೊತೆ ಬೆಡ್ ಶೀಟ್ ಬಗ್ಗೆ ಜಗಳವಾಡಿದ್ದಳು. ಮರುದಿನ ಬೆಳಿಗ್ಗೆ 6 ಗಂಟೆ ಸುಮಾರಿಗೆ, ಆಕೆಯ ತಾಯಿ ಅವಳನ್ನು ಎಬ್ಬಿಸಲು ಪ್ರಯತ್ನಿಸಿದರು, ಆದರೆ ಯಾವುದೇ ಪ್ರತಿಕ್ರಿಯೆ ಬರಲಿಲ್ಲ.
ಹೀಗಾಗಿ ಕೋಣೆಯ ಬಾಗಿಲು ಒಡೆದು ನೋಡಿದಾಗ, ಕುಟುಂಬಸ್ಥರು ಶ್ರಾವ್ಯಳನ್ನು ಫ್ಯಾನಿಗೆ ನೇಣು ಹಾಕಿಕೊಂಡಿರುವುದನ್ನು ನೋಡಿದರು. ಘಟನಾ ಸ್ಥಳದಲ್ಲಿ ಯಾವುದೇ ಡೆತ್ ನೋಟ್ ಸಿಕ್ಕಿಲ್ಲ. ಆದರೆ, ಶ್ರಾವ್ಯಳ ಜಿಮ್ ಸ್ನೇಹಿತರು ಮತ್ತು ತರಬೇತುದಾರರು ಆಕೆ ತನ್ನ ಹೆತ್ತವರ ಆಗಾಗ ಜಗಳವಾಡುತ್ತಿದ್ದರಿಂದ ಬೇಸತ್ತಿದ್ದಳು ಎಂದು ಹೇಳಿದ್ದಾರೆ.
ಶ್ರಾವ್ಯ ರಾಜರಾಜೇಶ್ವರಿನಗರದ ಚನ್ನಸಂದ್ರದಲ್ಲಿರುವ ಖಾಸಗಿ ಕಾಲೇಜಿನಲ್ಲಿ ಬಿಬಿಎ ದ್ವಿತೀಯ ವರ್ಷದ ವ್ಯಾಸಂಗ ಮಾಡುತ್ತಿದ್ದಳು. ವರದಿಗಳ ಪ್ರಕಾರ ಘಟನೆಯ ಹಿಂದಿನ ರಾತ್ರಿ ತನ್ನ ಅಕ್ಕನೊಂದಿಗೆ ಬೆಡ್‌ಶಿಟ್ ವಿಚಾರದಲ್ಲಿ ಗಲಾಟೆ ಮಾಡಿದ್ದಳು. ತಂದೆ ಬುದ್ದಿ ಹೇಳಿದ್ದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆನ್ನಲಾಗಿದೆ
