
ನಾಸಾ ಬಾಹ್ಯಾಕಾಶ ಯಾನಿಗಳಾದ ಸುನಿತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಭೂಮಿಗೆ ಮರಳುವ ದಿನ ಮತ್ತಷ್ಟು ವಿಳಂಬವಾಗಲಿದೆ.
ಇಬ್ಬರು ಗಗನಯಾನಿಗಳು ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ ಕೈಗೊಂಡ ಅಲ್ಪಾವಧಿ ಮಿಷನ್ 10 ತಿಂಗಳ ಉಳಿಯುವಿಕೆಯಾಗಿ ಆಗಿ ಪರಿಣಮಿಸಿದ್ದು, ಇಬ್ಬರು ಗಗನಯಾನಿಗಳು ಭೂಮಿಗೆ ಮರಳುವ ಸಮಯ ಮತ್ತೆ ಮುಂದೂಡಿಕೆಯಾಗಿದೆ
ಗಗನಯಾತ್ರಿಗಳನ್ನು ಕರೆತರುವ ನಿಟ್ಟಿನಲ್ಲಿ 4 ಮಂದಿ ಹೊಸ ಗಗನಯಾತ್ರಿಗಳನ್ನು ಹೊತ್ತ ರಾಕೆಟ್ ಕಳುಹಿಸಲು NASA ಸಿದ್ಧತೆ ಮಾಡಿಕೊಂಡಿತ್ತು. ಆದ್ರೆ ರಾಕೆಟ್ ಉಡಾವಣೆ ದಿಢೀರ್ ಪೋಸ್ಟ್ ಫೋನ್ ಆಗಿದ್ದು , ಹೈಡ್ರಾಲಿಕ್ ಸಿಸ್ಟಮ್ ಸಮಸ್ಯೆಯಿಂದ ಉಡಾವಣೆ ಕ್ಯಾನ್ಸಲ್ ಆಗಿದೆ.
ಫಾಲ್ಕನ್ 9 ಎಂಬ ಹೆಸರಿನ ರಾಕೆಟ್ ಮತ್ತೆ ಶುಕ್ರವಾರ ಉಡಾವಣೆ ಆಗುವ ಸಾಧ್ಯತೆ ಇದೆ. ಎಲಾನ್ ಮಸ್ಕ್ ಒಡೆತನದ ಸ್ಪೇಸ್ ಎಕ್ಸ್ ಕಂಪನಿ ಹೈಡ್ರಾಲಿಕ್ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದೆ
