
ಹೈ ದರಾಬಾದ್ : ಮಲ್ಲಾಪುರ ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್ ಗೆ ಪೆಟ್ರೋಲ್ ತುಂಬಿಸುವ ವೇಳೆ ದುಷ್ಕರ್ಮಿಯೊಬ್ಬ ಬೆಂಕಿ ಹಚ್ಚಿದ ಘಟನೆ ಶನಿವಾರ ಸಂಜೆ ನಡೆದಿದೆ.
ಸ್ಥಳೀಯರ ಪ್ರಕಾರ, ಚಂದನಕುಮಾರ್ (19) ತನ್ನ ಸ್ನೇಹಿತರೊಂದಿಗೆ ಆಕ್ಟಿವಾ ದ್ವಿಚಕ್ರ ವಾಹನದಲ್ಲಿ ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್‌ಗೆ ಪೆಟ್ರೋಲ್ ತುಂಬಿಸಲು ಮಲ್ಲಾಪುರದ ಹಳೆ ಮೀರಪೇಟೆಗೆ ಬಂದಿದ್ದರು.
ಇದೇ ವೇಳೆ ಸಿಬ್ಬಂದಿ ಮತ್ತೋರ್ವ ಗ್ರಾಹಕರಿಗೆ ಬಾಟಲಿಯಲ್ಲಿ ಪೆಟ್ರೋಲ್ ಹಾಕಿಸುತ್ತಿದ್ದಾಗ ಏಕಾಏಕಿ ಜೇಬಿನಿಂದ ಲೈಟರ್ ತೆಗೆದು ಚಂದನಕುಮಾರ್ ಹೊತ್ತಿಸಿದರು. ಸಿಬ್ಬಂದಿ ಎಚ್ಚೆತ್ತು ಬೆಂಕಿ ನಂದಿಸುವ ಮೂಲಕ ಭಾರೀ ಅನಾಹುತ ತಪ್ಪಿಸಿದ್ದಾರೆ.
ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ ಬಳಿಕ ಚಂದನ್ ಕುಮಾರ್ ನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.






