
ಪುತ್ತೂರು: ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ. ದೇವರ ಕಾಣಿಕೆ ಹುಂಡಿಯಲ್ಲಿ ಮಹಿಳೆಯೊಬ್ಬರು ಬರೆದಿದ್ದಾರೆನ್ನಲಾದ ಚೀಟಿವೊಂದು ದೊರಕಿದ್ದು, ಚೀಟಿಯಲ್ಲಿ ತಮಗಾದ ಅನ್ಯಾಯದ ಬರೆದುಕೊಂಡಿದ್ದಾರೆ.
ಚೀಟಿಯಲ್ಲಿ ಏನಿದೆ!?
‘ಸಮೀರ್ ಅನ್ನೋವನು ನನ್ನ ಜೀವನ ಹಾಳು ಮಾಡಿದ್ದಾನೆ. ಈವತ್ತು ನಾನು ನನ್ನ ಮಗಳು ಬೀದಿಯಲ್ಲಿ ಇದ್ದಿವಿ, ಅವನ ಜೀವನ ಕೂಡ ಹಾಳು ಆಗಬೇಕು ಅವನಿಗೆ ಮದುವೆ ಆಗಲು ಹುಡುಗಿ ಸಿಗಬಾರದು. ಓ ದೇವರೆ ಇದು ನನ್ನ ಪ್ರಾರ್ಥನೆ’ ಎಂದು ಬರೆಯಲಾಗಿದೆ.
ಈ ಬಗ್ಗೆ ವಿಶ್ವ ಹಿಂದೂ ಪರಿಷದ್ ಬಜರಂಗದಳ, ಮಾತೃಶಕ್ತಿ, ದುರ್ಗಾವಾಹಿನಿ ಪುತ್ತೂರು ಪ್ರತಿಕ್ರಿಯಿಸಿದ್ದು, ಅನ್ಯಾಯ ಆಗಿದ್ದರೆ ಸಂಪರ್ಕಿಸುವಂತೆ ತಿಳಿಸಿದೆ.






