ಬೆಂಗಳೂರು: ಬೆಂಗಳೂರು ನಗರದಲ್ಲಿ ನಿನ್ನೆ ಆಘಾತಕಾರಿ ಘಟನೆಯೊಂದು ವರದಿಯಾಗಿದೆ. ಜೊತೆಗೇ ಇದರ ವಿಡಿಯೋ ಕೂಡ ವೈರಲ್‌ (Viral video) ಆಗುತ್ತಿದೆ. 40 ವರ್ಷದ ಬಿಎಂಟಿಸಿ ಬಸ್ ಚಾಲಕರೊಬ್ಬರು (BMTC bus driver) ವಾಹನ ಚಲಾಯಿಸುವಾಗಲೇ ಹೃದಯಾಘಾತದಿಂದ (Heart Failure) ಸಾವನ್ನಪ್ಪಿದ್ದಾರೆ. ಚಲಿಸುತ್ತಿದ್ದ ಬಸ್ಸನ್ನು ಕಂಡಕ್ಟರ್‌ ಸಮಯಪ್ರಜ್ಞೆ ಮೆರೆದು ನಿಲ್ಲಿಸಿ, 50 ಜನರ ಜೀವ ಉಳಿಸಿದ್ದಾರೆ.

ಬಿಎಂಟಿಸಿ ಚಾಲಕ ಕಿರಣ್‌ ಕುಮಾರ್‌ ಎಂಬವರು ಮೃತಪಟ್ಟ ವ್ಯಕ್ತಿ. ಬಸ್ ನೆಲಮಂಗಲದಿಂದ ದಾಸನಪುರಕ್ಕೆ ತೆರಳುತ್ತಿದ್ದಾಗ ಬೆಳಗ್ಗೆ 11 ಗಂಟೆಗೆ ಈ ಘಟನೆ ನಡೆದಿದೆ. ಈ ಘಟನೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಹೃದಯಾಘಾತದಿಂದ ಡೈವರ್ ಕುಸಿದು ಬಿದ್ದ ಕ್ಷಣವನ್ನು ಬಸ್ನಲ್ಲಿ ಅಳವಡಿಸಲಾಗಿದ್ದ ಕ್ಯಾಮೆರಾ ತೋರಿಸಿದೆ.

ಚಾಲಕ ಎದೆನೋವಿನಿಂದ ಕೆಳಗೆ ಬೀಳುತ್ತಿದ್ದಂತೆ ಸಮಯಪ್ರಜ್ಞೆ ಮೆರೆದ ಕಂಡಕ್ಟರ್ ಓಬಳೇಶ್‌ ಎನ್ನುವವರು ತಾವೇ ಬಸ್ ಅನ್ನು ನಿಯಂತ್ರಣಕ್ಕೆ ತೆಗೆದುಕೊಂಡು ಬಸ್ಸು ಹಾಗೂ ರಸ್ತೆಯಲ್ಲಿದ್ದ ಹಲವರ ಪ್ರಾಣ ಉಳಿಸಿದ್ದಾರೆ. ಈ ಸಂದರ್ಭದಲ್ಲಿ ಬಸ್ಸಿನಲ್ಲಿ ಸುಮಾರು 50 ಜನರಿದ್ದರು ಎಂದು ಗೊತ್ತಾಗಿದೆ. ನಿಯಂತ್ರಣ ಕಳೆದುಕೊಂಡ ಬಸ್ಸು ಪಕ್ದಲ್ಲಿದ್ದ ಇನ್ನೊಂದು ಬಿಎಂಟಿಸಿ ಬಸ್ಸನ್ನು ಸವರಿಕೊಂಡು ಹೋಗಿದೆ. ಆದರೆ ಡಿಕ್ಕಿಯಾಗಿಲ್ಲ.

https://twitter.com/gharkekalesh/status/1854223754664325469

Leave a Reply

Your email address will not be published. Required fields are marked *

Join WhatsApp Group
error: Content is protected !!