ತಿವಿಯಲು ಬಂದ ಗೂಳಿಯನ್ನು ಹಿಮ್ಮೆಟ್ಟಿ ಅದರ ಜೊತೆ ಹೋರಾಡಿದ ಸಾಹಸಿ ಮಹಿಳೆಯ ವಿಡಿಯೋ ವೈರಲ್ ಆಗಿದ್ದು, ಭಯಾನಕ ವಿಡಿಯೋ ನೋಡುಗರ ಎದೆ ಝಲ್ ಎನಿಸುವಂತಿದೆ.

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ. ಓರ್ವ ಮಹಿಳೆ ಮನೆಯಿಂದ ಹೊರಗೆ ಬಂದಳು. ಅವಳು ಕಿರಿದಾದ ಬೀದಿಯಲ್ಲಿ ನಡೆದು ಕೊಂಡು ಹೋಗುತ್ತಿದ್ದಳು.

ಅಷ್ಟರಲ್ಲಿ, ಅಲ್ಲಿದ್ದ ಗೂಳಿ ಮಹಿಳೆಯ ಮೇಲೆ ದಾಳಿ ಮಾಡಿತು.

ಪರಿಣಾಮ ಅವಳು ನೆಲಕ್ಕೆ ಬಿದ್ದಳು, ಗೂಳಿ ಅವಳನ್ನು ಕೊಂಬುಗಳಿಂದ ಇರಿದು ಕೊಲ್ಲಲು ಯತ್ನಿಸಿತು. ಆದರೆ, ವೃದ್ಧ ಮಹಿಳೆ ಧೈರ್ಯದಿಂದ ಗೂಳಿಯ ಕೊಂಬು ಹಿಡಿದು ಎದುರಿಸಿದ್ದಾಳೆ. ಸದ್ಯ ಈ ವಿಡಿಯೋ ಸಖತ್ ವೈರಲ್ ಆಗಿದೆ. ಮಹಿಳೆಯ ಧೈರ್ಯಕ್ಕೆ ನೆಟ್ಟಿಗರು ಶಹಬ್ಬಾಶ್ ಎಂದಿದ್ದಾರೆ.

https://twitter.com/ChotaNewsTelugu/status/1854372339552764069?ref_src=twsrc%5Etfw%7Ctwcamp%5Etweetembed%7Ctwterm%5E1854372339552764069%7Ctwgr%5E4736b17e89056d474e0809b079412115d45ed5aa%7Ctwcon%5Es1_c10&ref_url=http%3A%2F%2Fapi-news.dailyhunt.in%2F

Leave a Reply

Your email address will not be published. Required fields are marked *

Join WhatsApp Group
error: Content is protected !!