ಖ್ಯಾ ತ ನಟ ಶಿವರಾಜ್ ಕುಮಾರ್ ಅವರು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದು ಬಹಿರಂಗಪಡಿಸಿದ್ದಾರೆ. ಅವರು ಅಮೆರಿಕದಲ್ಲಿ ಶಸ್ತ್ರಚಿಕಿತ್ಸೆಗೆ ಉದ್ದೇಶಿಸಿದ್ದಾರೆ. ಶಿವಣ್ಣ ಅವರು ಚಿಕಿತ್ಸೆಗಾಗಿ ಒಂದು ತಿಂಗಳು ಅಮೆರಿಕಕ್ಕೆ ತೆರಳುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ.

ಈ ಸುದ್ದಿಯಿಂದ ಅಭಿಮಾನಿಗಳು ಆತಂಕಗೊಂಡಿದ್ದಾರೆ.
ನಟ ಶಿವರಾಜ್ಕುಮಾರ್ ಅವರಿಗೆ 60 ವರ್ಷದ ಮೇಲಾಗಿದೆ. ಈಗಲೂ ಅವರು ಫಿಟ್ ಆಗಿದ್ದಾರೆ. ಅವರು ಆರೋಗ್ಯಕರ ಡಯಟ್ ಫಾಲೋ ಮಾಡುತ್ತಾರೆ. ನಿತ್ಯ ಶೂಟಿಂಗ್ನಲ್ಲಿ ಭಾಗವಹಿಸುತ್ತಾರೆ. ಸದ್ಯ ಅವರು ‘ಭೈರತಿ ರಣಗಲ್’ ಚಿತ್ರದ ಪ್ರಮೋಷನ್ನಲ್ಲಿ ಬ್ಯುಸಿ ಇದ್ದಾರೆ. ಈಗ ಅವರು ಒಂದು ಶಾಕಿಂಗ್ ವಿಚಾರ ರಿವೀಲ್ ಮಾಡಿದ್ದಾರೆ. ತಮಗೆ ಅನಾರೋಗ್ಯ ಆಗಿರೋದು ಹೌದು ಎಂದಿರುವ ಅವರು, ಶಸ್ತ್ರಚಿಕಿತ್ಸೆಗಾಗಿ ಅಮೆರಿಕ ತೆರಳೋದಾಗಿ ಹೇಳಿದ್ದಾರೆ.

ಸುದ್ದಿ ಮನೆ ಯೂಟ್ಯೂಬ್ ಚಾನೆಲ್ಗೆ ನೀಡಿದ ಸಂದರ್ಶನದಲ್ಲಿ ಶಿವಣ್ಣ ಮಾತನಾಡಿದ್ದಾರೆ. ಅಲ್ಲಿ ಅವರು ಅನಾರೋಗ್ಯದ ಬಗ್ಗೆ ಹೇಳಿಕೊಂಡಿದ್ದಾರೆ. ‘ನನಗೆ ಅನಾರೋಗ್ಯ ಇದೆ. ನಾನು ಸುಳ್ಳು ಹೇಳಲ್ಲ. ನನೂ ಮನುಷ್ಯನೇ. ಟ್ರೀಟ್ಮೆಂಟ್ ತೆಗೆದುಕೊಳ್ಳುತ್ತಿದ್ದೇನೆ’ ಎಂದಿದ್ದಾರೆ ಅವರು.

‘ಟ್ರೀಟ್ಮೆಂಟ್ಗೆ ನಾಲ್ಕು ಸೆಷನ್ ಇದೆ. ಈಗಾಗಲೇ ಎರಡು ಸೆಷನ್ ಆಗಿದೆ. ಇನ್ನೆರಡು ಸೆಷನ್ ಮಾಡಬೇಕಿದೆ. ಒಂದು ಸರ್ಜರಿ ನಡೆಯಬೇಕಿದೆ. ಅಮೆರಿಕದಲ್ಲಿ ಮಾಡೋದಾ ಅಥವಾ ಇಲ್ಲಿ ಮಾಡೋದಾ ಎನ್ನುವ ಬಗ್ಗೆ ಯೋಚನೆ ನಡೆಯುತ್ತಿದೆ. ಅಮೆರಿಕದಲ್ಲಿ ಮಾಡೋದು ಎಂದಾದರೆ ಒಂದು ತಿಂಗಳು ನಾನು ಅಲ್ಲಿಗೆ ಹೋಗಬೇಕಾಗುತ್ತದೆ. ಜನವರಿಯಿಂದ ನಾನು ಫುಲ್ ಫಾರ್ಮ್ ಶಿವಣ್ಣ ಬರ್ತಾರೆ’ ಎಂದಿದ್ದಾರೆ ಅವರು.

ಶಿವರಾಜ್ಕುಮಾರ್ ಅವರು ತಮ್ಮ ನಿರ್ಮಾಪಕರಿಗೆ ಈ ಬಗ್ಗೆ ಮಾಹಿತಿ ನೀಡಿದ್ದಾರಂತೆ. ಮುಂದೆ ಯಾವುದೇ ಸಮಸ್ಯೆ ಆಗಬಾರದು ಎನ್ನುವ ಕಾರಣಕ್ಕೆ ಅವರು ಈ ರೀತಿ ಮಾಡಿದ್ದಾರೆ. ‘ಉಳಿದ ಸಮಯದಲ್ಲಿ ನಾವು ಅಭಿಮಾನಿಗಳು ಬೇಕು ಎನ್ನುತ್ತೇವೆ. ಈ ರೀತಿ ವಿಚಾರ ಬಂದಾಗ ಏಕೆ ಅವರನ್ನು ದೂರ ಇಡಬೇಕು? ಈ ಕಾರಣಕ್ಕೆ ನಾನು ಸುಳ್ಳು ಹೇಳೋದು ಬೇಡ ಎಂದು ಗೀತಾ ಅವರ ಬಳಿ ಹೇಳಿದೆ. ಅಭಿಮಾನಿಗಳು ಫೋಟೋ ತೆಗೆಸಿಕೊಳ್ಳೋಕೆ ಬಂದಾಗ ದೂರ ನಿಲ್ಲಿ ಎನ್ನುತ್ತೇನೆ. ಅವರಿಗೆ ಇನ್ಫೆಕ್ಷನ್ ಆಗಬಾರದು ಎನ್ನುವ ಕಾರಣಕ್ಕೆ ಈ ರೀತಿ ಮಾಡಿದ್ದೇನೆ ಅಷ್ಟೇ. ಇದೆಲ್ಲ ಇನ್ನೆರಡು ತಿಂಗಳು ಅಷ್ಟೇ’ ಎಂದಿದ್ದಾರೆ ಅವರು.

ಶಿವರಾಜ್ಕುಮಾರ್ ಅವರು ಯಾವ ರೀತಿಯ ತೊಂದರೆ ಎದುರಿಸುತ್ತಿದ್ದಾರೆ ಎಂಬುದನ್ನು ರಿವೀಲ್ ಮಾಡಿಲ್ಲ. ಆದರೆ, ಯಾವುದೋ ಗಂಭೀರ ಸಮಸ್ಯೆಯನ್ನು ಅವರು ಎದುಸುತ್ತಿದ್ದಾರೆ ಎಂಬುದು ಸ್ಪಷ್ಟವಾಗಿದೆ. ಅವರು ಬೇಗೆ ಚೇತರಿಕೆ ಕಾಣಲಿ ಎಂದು ಫ್ಯಾನ್ಸ್ ಬಯಸುತ್ತಿದ್ದಾರೆ. ಅವರ ನಟನೆಯ ‘ಭೈರತಿ ರಣಗಲ್’ ಚಿತ್ತ ನವೆಂಬರ್ 15ರಂದು ರಿಲೀಸ್ ಆಗಲಿದೆ.

Leave a Reply

Your email address will not be published. Required fields are marked *

Join WhatsApp Group
error: Content is protected !!