ಚಿ ಕ್ಕಮಗಳೂರು,ನ.10- ಜಿಲ್ಲೆಗೆ ವಲಸೆ ಬಂದು ಕಾಫಿ ತೋಟಗಳಿಗೆ ನುಗ್ಗಿ ದಾಂಧಲೆ ಎಬ್ಬಿಸುತ್ತಿರುವ ಬೀಟಮ ಆನೆ ಗ್ಯಾಂಗ್ನ ಒಂದು ಸಲಗ ಸಾವನ್ನಪಿದೆ. ವಿದ್ಯುತ್ ತಂತಿ ಸ್ಪರ್ಶಿಸಿ ಕಾಡಾನೆ ಮೃತಪಟ್ಟಿದ್ದು, ಆಲ್ದೂರು ಸಮೀಪದ ತುಡುಕೂರು ಗ್ರಾಮದ ಕಾಫಿ ತೋಟಗಳ ನಡುವೆ ಮೃತ ದೇಹ ಪತ್ತೆಯಾಗಿದೆ.

ಕಾಫಿನಾಡಲ್ಲಿ 17 ಕಾಡಾನೆಗಳ ಹಿಂಡಿನ ಬೀಟಮ ಗ್ಯಾಂಗಿನ ಹಾವಳಿ ವಿಪರೀತಗೊಂಡಿತ್ತು. ಈ ನಡುವೆ ಇಂದು ಬೀಟಮ ಗ್ಯಾಂಗ್ ನ ಒಂದು ಸಲಗ ಸಾವನ್ನಪಿದೆ ವಿದ್ಯುತ್ ಸ್ಪರ್ಶಿಸಿ ಒಂದು ಸಲಗ ಮೃತಪಟ್ಟಿರಬಹುದು ಎಂದು ಶಂಕೆ ವ್ಯಕ್ತಪಡಿಸಲಾಗಿದೆ. ತಾಲೂಕಿನ ತುಡುಕೂರು ಗ್ರಾಮದ ಕಾಫಿ ತೋಟಗಳ ಬಳಿ ಘಟನೆ ನಡೆದಿದ್ದು ತೋಟದಲ್ಲಿ ವಿದ್ಯುತ್ ಸ್ಪರ್ಶದಿಂದ ಸಾವನ್ನಪ್ಪಿದ ಒಂಟಿ ಸಲಗ ಸ್ಥಳದಲ್ಲೇ ಅಸುನೀಗಿದೆ.

ಕಳೆದ 3 ದಿನಗಳಿಂದ 17 ಕಾಡಾನೆ ಗಳ ಹಿಂಡು ಬೀಟಮ ಗ್ಯಾಂಗ್ ತುಡುಕೂರು ಸುತ್ತಮುತ್ತ ಸಾಕಷ್ಟು ಬೆಳೆ ನಾಶ ಹಾಗೂ ಜನರಿಗೆ ಭೀತಿ ಹುಟ್ಟಿಸಿತ್ತು. 3ದಿನಗಳಿಂದ ಬೀಟಮ ಗ್ಯಾಂಗ್ ಆಲ್ದೂರು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೀಟ್ ಮಾಡುತ್ತಿದ್ದವು. ಒಟ್ಟು 17 ಕಾಡಾನೆಗಳಲ್ಲಿ ಒಂದು ಸಲಗ ವಿದ್ಯುತ್ ಸ್ಪರ್ಶದಿಂದ ಸಾವನ್ನಪ್ಪಿದೆ ಎಂದು ತಿಳಿದುಬಂದಿದೆ.

 

ಸದ್ಯ ಸ್ಥಳಕ್ಕೆ ಅರಣ್ಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಭೇಟಿಯನ್ನು ನೀಡಿ ಪರಿಶೀಲನೆ ಮಾಡುತ್ತಿದ್ದಾರೆ. ಚಿಕ್ಕಮಗಳೂರು ತಾಲೂಕಿನ ಹಲವು ಗ್ರಾಮಗಳಲ್ಲಿ ಬೀಟಮ ಗ್ಯಾಂಗ್ ಹಾವಳಿ ತೀವ್ರಗೊಂಡಿತ್ತು.

ನಿಷೇಧಾಜ್ಞೆ: ಆಲ್ದೂರು ಸುತ್ತಮುತ್ತಲಿನ ಹಳ್ಳಿಗಳಲ್ಲಿ ಕಾಡಾನೆಗಳು ಇಂದು ಬೀಡು ಬಿಟ್ಟಿದ್ದು, 10 ಹಳ್ಳಿಗಳಲ್ಲಿ ಇಂದು ರಾತ್ರಿ 9.30ರವರೆಗೂ ನಿಷೇಧಾಜ್ಞೆ ಜಾರಿಗೊಳಿಸಿ ತಹಸೀಲ್ದಾರ್ ಆದೇಶ ಹೊರಡಿಸಿದ್ದಾರೆ.

ಆಲ್ದೂರುಪುರ, ತುಡಕೂರು, ತೋರಣಮಾವು, ಚಿತ್ತವಳ್ಳಿ, ದತ್ತನಾಗರವಳ್ಳಿ, ಕೆಳಗೂರು ಸೇರಿದಂತೆ ಸುತ್ತಮುತ್ತಲಿನ 10 ಹಳ್ಳಿಗಳಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದ್ದು, ಜನರು ಮನೆಯಿಂದ ಹೊರಬರದಂತೆ ಎಚ್ಚರಿಕೆ ನೀಡಲಾಗಿದೆ. ಪಟಾಕಿಗಳನ್ನು ಸಿಡಿಸಬಾರದೆಂದು ಸೂಚನೆ ನೀಡಲಾಗಿದೆ.

Leave a Reply

Your email address will not be published. Required fields are marked *

Join WhatsApp Group
error: Content is protected !!