ಸುಳ್ಯ :ಕೆಲದಿನಗಳ ಹಿಂದೆ ಆತ್ಮಹತ್ಯೆಗೆ ಪ್ರಯತ್ನಿಸಿ ಮಂಗಳೂರಿನ ಎಜೆ ಆಸ್ಪತ್ರೆಯೊಂದರ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸುಳ್ಯದ ಯುವ ಅಡಿಕೆ ವ್ಯಾಪಾರಿ ಕೋಲ್ಟಾರಿನ ಅಭಿಲಾಷ್ ಕೊಲ್ಲೆರಮೂಲೆ (29 ವ) ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಅಭಿಲಾಷ್ ಸುಳ್ಯದ ಗಾಂಧಿನಗರದಲ್ಲಿ ಪಾಲುದಾರಿಕೆಯಲ್ಲಿ ಅಡಿಕೆ ವ್ಯಾಪಾರ ನಡೆಸುತ್ತಿದ್ದರು. ಸುಳ್ಯ ಭಾಗಗಳಲ್ಲಿ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಹಿಂದೂ ಸಂಘಟನೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದರು.

ಅಡಿಕೆ ಶೇಟ್ ಗಳಿಂದ ಮೋಸ ..?

ಅಡಿಕೆ ವ್ಯಾಪಾರಿಗಳಿಂದ ಇತ್ತಿಚೆಗೆ ಸಾವಿರಾರು ಕ್ವಿಂಟಲ್ ಅಡಿಕೆ ಉತ್ತರ ಭಾರತದ ಕಡೆ ಹೋಗಿತ್ತು. ಅದರಲ್ಲಿ ಕೆಲವು ವ್ಯಾಪಾರಿಗಳಿಗೆ ಹಣ ಸಿಕ್ಕಿರಲಿಲ್ಲ.

ಅಭಿಲಾಷ್ ಪಾಲುದಾರಿಕೆಯ ಅಂಗಡಿಯಿಂದ ಕೂಡ ಈ ತಂಡಕ್ಕೆ ಅಪಾರ ಅಡಿಕೆ ಹೋಗಿತ್ತು ಆದರೆ ಅಡಿಕೆ ಮಾರಿದ ಹಣ ಬಂದಿರಲಿಲ್ಲ ಎನ್ನಲಾಗಿದೆ. ಅಂಗಡಿಯ ಲೆಕ್ಕಚಾರ ವ್ಯವಹಾರವೂ ಅಭಿಲಾಷ್‌ ಅವರೇ ನೋಡಿಕೊಳ್ಳುತ್ತಿದ್ದರು.

ಅಭಿಲಾಷ್ ಈ ಹಣವನ್ನು ಹೊಂದಿಸಲು ಪ್ರಯತ್ನಿಸುತ್ತಿದ್ದರು ಎಂದು ಆಪ್ತರು ತಿಳಿಸಿದ್ದಾರೆ.

ಆದರೆ ಹಣ ಹೊಂದಿಸಲಾಗದೇ ವಿಷಹಾರ ತೆಗೆದುಕೊಂಡಿದ್ದ ಅಭಿಲಾಷ್ ನನ್ನು ಮಂಗಳೂರಿನ ಎಜೆ ಆಸ್ಪತ್ರೆಗೆ ಸೇರಿಸಲಾಗಿತ್ತು. ಇಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

 

Leave a Reply

Your email address will not be published. Required fields are marked *

Join WhatsApp Group
error: Content is protected !!