ವಿಟ್ಲ: ಬಂಟ್ವಾಳ ತಾಲೂಕಿನ ಪೆರಾಜೆಯ 10ರ ಹರೆಯದ ಬಾಲಕಿ ತೀರ್ಥಶ್ರೀ (8) ಸಾವಿನ ಪ್ರಕರಣದ ತನಿಖೆಯನ್ನು ವಿಟ್ಲ ಪೊಲೀಸರು ನಡೆಸುತ್ತಿದ್ದು ಅದೊಂದು ಆತ್ಮಹತ್ಯೆಯಾಗಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ಆರಂಭದಲ್ಲಿ ಆಕೆ ಜೋಕಾಲಿಯ ಹಗ್ಗ ಸಿಲುಕಿ ಮೃತಪಟ್ಟಿರಬಹುದು ಎಂದು ವರದಿಯಾಗಿತ್ತು.
ಶೇರಾ ಶಾಲೆಯ ಮೂರನೇ ತರಗತಿಯ ವಿದ್ಯಾರ್ಥಿನಿ ಮಡಲ ನಿವಾಸಿ ಕಿಶೋರ್ ರವರ ಪುತ್ರಿ ತೀರ್ಥಶ್ರೀ ಡಿ 8ರ ಸಂಜೆ 5 ಗಂಟೆಯಿಂದ 7.30ರ ಅವಧಿಯಲ್ಲಿ ಮೃತಪಟ್ಟಿದ್ದಳು.
ಬಟ್ಟೆ ಹಾಕಲು ಹಾಕಿದ ಸ್ಟೀಲ್ ರಾಡ್ಗೆ ಚಡ್ಡಿಯ ಲಾಡಿ (ಹಗ್ಗದಿಂದ) ಕುಣಿಕೆ ಮಾಡಿ ಒಂದು ತುದಿಯನ್ನು ಸ್ಟೀಲ್ ರಾಡ್ಗೂ ಮತ್ತೂಂದು ತುದಿಯನ್ನು ಕುತ್ತಿಗೆ ಹಾಕಿ ನೇಣು ಬೀಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ ಠಾಣೆಗೆ ನೀಡಿದ ದೂರಿನಲ್ಲಿ ಉಲ್ಲೇಖಿಸಿರುವ ಬಗ್ಗೆ ತಿಳಿದು ಬಂದಿದೆ
ಇದೀಗ ಬಾಲಕಿಯ ಸಾವಿನ ನಿಖರ ಕಾರಣ ತಿಳಿಯಲು ವಿಟ್ಲ ಪೊಲೀಸರು ಬಾಲಕಿಯ ಪೋಷಕರಲ್ಲಿ ಮತ್ತು ಸ್ನೇಹಿತರಲ್ಲಿ ಮಾಹಿತಿ ಸಂಗ್ರಹಿಸಿ ವಿಚಾರಣೆ ನಡೆಸುತ್ತಿದ್ದಾರೆ. ಬಳಿಕ ಸಾವಿನ ನಿಖರ ಕಾರಣ ತಿಳಿದು ಬರಲಿದೆ