ನಗರದ ಮಾರತ್ತಹಳ್ಳಿ ಪೊಲೀಸ್ ಠಾಣಾ (Marathahalli Police Station) ವ್ಯಾಪ್ತಿಯಲ್ಲಿ ಉತ್ತರ ಪ್ರದೇಶ (Uttar Pradesh) ಮೂಲದ ಅತುಲ್ ಸುಭಾಷ್ (Atul Subhash) ಎಂಬ ವ್ಯಕ್ತಿ ಖಿನ್ನತೆಗೆ (Depression) ಒಳಗಾಗಿ 40ಕ್ಕೂ ಹೆಚ್ಚು ಪುಟಗಳ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ (suicide) ಮಾಡಿಕೊಂಡಿರುವ ಘಟನೆ ನಡೆದಿದೆ.
ಇನ್ನು ಮೃತ ಅತುಲ್ #justice is due ಎಂಬ ಬರಹ ಇರೋ ಬೋರ್ಡ್ ಕತ್ತಿಗೆ ಹಾಕಿಕೊಂಡು ಜೊತೆಗೆ 40ಕ್ಕೂ ಹೆಚ್ಚು ಪೇಜ್ ಗಳ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಪತಿ ವಿರುದ್ದ ಪತ್ನಿಯಿಂದ ದೂರು
ಮಾರತಹಳ್ಳಿಯ ಮಂಜುನಾಥ್ ಲೇಔಟ್ ನಲ್ಲಿ ವಾಸವಾಗಿದ್ದ ಅತುಲ್ ಮೇಲೆ ಅವನ ಪತ್ನಿ ಉತ್ತರ ಪ್ರದೇಶದಲ್ಲಿ ಠಾಣೆಯಲ್ಲಿ ದೂರು ದಾಖಲಿಸಿದ್ದು, ಇದರಿಂದ ಮಾನಸಿಕವಾಗಿ ನೊಂದು ಹೋಗಿದ್ದ ಎನ್ನಲಾಗಿದೆ. ಈ ಕಾರಣದಿಂದ ಅತುಲ್ NGO ದ ವಾಟ್ಸಾಪ್ ಗ್ರೂಪ್ಗೆ ಮಧ್ಯರಾತ್ರಿ ಗ್ರೂಪ್ ಡೆತ್ ನೋಟ್ ಕಳುಹಿಸಿ ಸಾಧ್ಯವಾದ್ರೆ ನನ್ನ ಕುಟುಂಬಕ್ಕೆ ಸಹಾಯ ಮಾಡಿ ವಿನಂತಿಸಿದ್ದಾನೆ.
ಮನೆಯ ಕಬೋರ್ಡ್ ಮೇಲೆ ಚೀಟಿ ಅಂಟಿಸಿ ಆತ್ಮಹತ್ಯೆ
ಅತುಲ್ ಡೆತ್ ನೋಟ್ ಎಲ್ಲಿದೆ, ಕೀ ಎಲ್ಲಿದೆ, ಏನೇನು ಕೆಲಸ ಆಗಿದೆ, ಏನೇನ್ ಕೆಲಸ ಬಾಕಿ ಇದೆ ಎಲ್ಲವನ್ನು ಉಲ್ಲೇಖಿಸಿ ಮನೆಯ ಕಬೋರ್ಡ್ ಮೇಲೆ ಅಂಟಿಸಿ ನೇಣಿಗೆ ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇನ್ನು ಘಟನಾ ಸ್ಥಳಕ್ಕೆ ಮಾರತ್ತಹಳ್ಳಿ ಪೊಲೀಸರು ಭೇಟಿ ಪರಿಶೀಲನೆ ನಡಸುತ್ತಿದ್ಧಾರೆ.
ಸಾವಿನ ಕಡೆಯ ಕ್ಷಣದಲ್ಲಿ ನೆನಪಾಯ್ತಾ ತನ್ನ ಕಂದಮ್ಮ?
ಇನ್ನು ಮೃತ ಅತುಲ್ಗೆ ಸಾವಿನ ಕಡೆಯ ಕ್ಷಣದಲ್ಲಿ ತನ್ನ ಕಂದಮ್ಮ ನೆನಪಾಗಿದ್ದು, ಪುತ್ರಿಗೆ ಗಿಫ್ಟ್ ಬಾಕಿ ಇಟ್ಟು, ಹೊರಟೇ ಹೋಗಿದ್ದಾನೆ. ಅತುಲ್ ತನ್ನ ನಾಲ್ಕು ವರ್ಷಗ ತನ್ನ ಪುತ್ರಿಗೆ ಗಿಫ್ಟ್ ಇಟ್ಟು, ಈ ಗಿಫ್ಟ್ ತನ್ನ ಪುತ್ರಿಗೆ ಈ ತಲುಪಿಸಿ ಎಂದು ಡೆತ್ ನೋಟ್ ನಲ್ಲಿ ಉಲ್ಲೇಖಸಿದ್ಧಾನೆ.
ಆತ್ಮಹತ್ಯೆಗೂ ಮೂರು ದಿನ ತಯಾರಿ
ಅತುಲ್ ಸುಭಾಷ್ ಆತ್ಮಹತ್ಯೆಗೂ ಮೂರು ದಿನ ಮುನ್ನ ತಯಾರಿ ನಡೆಸಿದ್ದು, ಡೇ-1, ಡೇ-2, ಡೇ-3 ಮೂರು ದಿನ ಏನ್ ಮಾಡ್ಬೇಕೆಂದು ಬರೆದಿಟ್ಟು ತಯಾರಿ ನಡೆಸಿದ್ದ ಎನ್ನಲಾಗಿದೆ. ಬೆಳಗ್ಗೆ ಎದ್ದು ಸ್ನಾನ ಮಾಡ್ಬೇಕು ಅನ್ನೋದರಿಂದ ಹಿಡಿದು ನಂತರ ಸೂಸೈಡ್ ಮಾಡೋವರೆಗೂ ಏನೇನ್ ಮಾಡ್ಬೇಕು ಅನ್ನೋದನ್ನ ಕಳೆದ ಮೂರುದಿನದಿಂದ ಪ್ರಾಕ್ಟೀಸ್ ಮಾಡಿ ಕೊನೆಗೆ ಮನೆಯ ಗೋಡೆ ಮೇಲೆ “JUSTICE IS DUE” ಪತ್ರ ಅಂಟಿಸಿ ಸೂಸೈಡ್ ಮಾಡಿ ಕೊಂಡಿದ್ದಾನೆ.