

ಬೆಂಗಳೂರು: ನಾಲ್ವರು ಶಾಲಾ ಮಕ್ಕಳು ಮುರುಡೇಶ್ವರ
ಪ್ರವಾಸದ ವೇಳೆ ಮೃತಪಟ್ಟಿದ್ದು, ಇದೀಗ ಈ ದುರ್ಘಟನೆಯ ಹಿನ್ನೆಲೆಯಿಂದ ಎಲ್ಲಾ ಶಾಲೆಗಳಿಗೂ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ
ಶಾಲೆಗಳು ಪ್ರವಾಸವನ್ನು ಹಮ್ಮಿಕೊಂಡಿದ್ದರೆ ಅಥವಾ ಈಗಗಾಲೇ ಪ್ರವಾಸಕ್ಕೆ ತೆರಳಿದರೆ ಪ್ರವಾಸವನ್ನು ತಕ್ಷಣವೇ ರದ್ದುಪಡಿಸಿ ಹಿಂದಿರುಗಬೇಕು ಎಂದು ತಿಳಿಸಿದ್ದಾರೆ.
ಮುರುಡೇಶ್ವರಕ್ಕೆ ಪ್ರವಾಸಕ್ಕೆ ಬಂದಿದ್ದ ಶಾಲೆ ಮಕ್ಕಳ ತಂಡದಿಂದ ನಾಲ್ವರು ನಿರೀನಲ್ಲಿ ಕೊಚ್ಚಿ ಹೋಗಿ ಮೃತಪಟ್ಟಿದ್ದು, ಇಂತಹ ಘಟನೆಗಳು ಮತ್ತೆ ಮರುಕಳಿಸದಂತೆ, ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದವರು ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕು. ಕೂಡಲೇ ಶಿಕ್ಷಣ ಇಲಾಖೆ ಹೊರಡಿಸಿರುವ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಶಿಕ್ಷಣ ಇಲಾಖೆ ಆಯುಕ್ತರು ಡಿಡಿಪಿಐಗಳಿಗೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ
.https://vidyamaana.com/?p=6646https://vidyamaana.com/?p=6646
