ಪುತ್ತೂರು: ಕ್ರಿಸ್‌ಮಸ್ ಹಬ್ಬದ ಸಂಭ್ರಮಾಚರಣೆಯ ಪರ್ವಕಾಲದಲ್ಲಿ ಸೌಹಾರ್ದತೆ ಬಂಧುತ್ವದ ದ್ಯೋತಕವಾಗಿ ಕ್ರಿಸ್‌ಮಸ್ ಸ್ನೇಹ ಸಮಾಗಮವು ಸಂಪನ್ನಗೊಂಡಿತು.
ಸ್ನೇಹ ಸಮಾಗಮದ ಸಂದೇಶವನ್ನು ಕಾಲೇಜಿನ ವ್ಯವಹಾರ ಆಡಳಿತ ವಿಭಾಗದ ಮುಖ್ಯಸ್ಥರಾದ ಡಾ| ರಾಧಾಕೃಷ್ಣ ಗೌಡರವರು ನೀಡಿದರು. ಕ್ರಿಸ್ತರ ಬೋಧನೆಯಲ್ಲಿರುವ ಸರಳತೆ, ಶಾಂತಿ ಮತ್ತು ಕ್ಷಮಾಗುಣಗಳನ್ನು ಮೈಗೂಡಿಸಿಕೊಳ್ಳಬೇಕಾದ ಅಗತ್ಯತೆಯ ಬಗ್ಗೆ ವಿವರಿಸಿದರು.
ಮುಖ್ಯ ಅತಿಥಿಗಳಾಗಿ ಕರ್ನಾಟಕ ಬ್ಯಾಂಕ್ ಪುತ್ತೂರು ಕ್ಲಸ್ಟರ್‌ನ ಮುಖ್ಯ ಪ್ರಬಂಧಕರಾದ ಶ್ರೀಹರಿಯವರು ಭಾಗವಹಿಸಿದರು. ತಾಂತ್ರಿಕ ಯುಗದಲ್ಲಿ ಸಹನೆ ಮತ್ತು ಶಾಂತ ಮನೋಭಾವಗಳ ಕೊರತೆಯಿದ್ದು ಕ್ರಿಸ್‌ಮಸ್ ಸಂದೇಶ ಪ್ರೇರಣೆಯನ್ನು ನೀಡಲಿ ಎಂದು ಶುಭ ಹಾರೈಸಿದರು.
ಪ್ರಾಂಶುಪಾಲರಾದ ವಂ|ಡಾ|ಆ್ಯಂಟನಿ ಪ್ರಕಾಶ್ ಮೊಂತೇರೊರವರು ಸಭಾಧ್ಯಕ್ಷತೆಯನ್ನು ವಹಿಸಿ ಸಮಭಾವ, ಸಮಚಿತ್ತದಿಂದ ಎಲ್ಲರೂ ಸೇರಿ ಆಚರಿಸುವ ಸ್ನೇಹಕೂಟ ಎಲ್ಲ ಪರ್ವಾಚರಣೆಗಳಿಗಿಂತ ಶ್ರೇಷ್ಠ ಎಂದು ತಿಳಿಸಿ ಎಲ್ಲರಿಗೂ ಶುಭ ಹಾರೈಸಿದರು.
ವಿದ್ಯಾರ್ಥಿಗಳು ಕ್ರಿಸ್‌ಮಸ್ ಗೀತೆಗಳನ್ನು ಹಾಡಿದರು.
ವಾರಿಜಾ ಎಂ ಮತ್ತು ಬಳಗ ಪ್ರಾರ್ಥಿಸಿದರು. ಕಾಲೇಜಿನ ಶೈಕ್ಷಣಿಕ ಕುಲಸಚಿವರಾದಡಾ| ನಾರ್ಬಟ್್ರ ಮಸ್ಕರೇನಸ್ ಸ್ವಾಗತಿಸಿ ಆಡಳಿತ ಸಹಾಯಕರಾದ ಮಾರಿಯೆಟ್ ಶಿರ್ಲಿ ವಂದಿಸಿದರು. ಕಾಲೇಜಿನ ವ್ಯವಹಾರ ಆಡಳಿತ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಪ್ರಶಾಂತ್ ರೈ ಕಾರ್ಯಕ್ರಮ ನಿರೂಪಿಸಿದರು