ಪುತ್ತೂರು: ಫಾರೂಖ್ ಜುಮಾ ಮಸೀದಿ ಹಯಾತ್ ನಗರ, ರೆಂಜದ ಆಶ್ರಯದಲ್ಲಿ ಖುದ್ವತು ಸಾದಾತ್ ಕೆ.ಎಸ್. ಅಟ್ಟಕ್ಕೋಯ ತಂಙಳ್ ಅವರ ಸಾರಥ್ಯದಲ್ಲಿ 27ನೇ ಸ್ವಲಾತ್ ವಾರ್ಷಿಕ ಹಾಗೂ ತಾಜುಲ್ ಉಲಮಾ ಅವರ ಅನುಸ್ಮರಣೆ ಮತ್ತು ಮೂರು ದಿನಗಳ ಧಾರ್ಮಿಕ ಪ್ರವಚನ ಕಾರ್ಯಕ್ರಮವು ಜ. 13, 14 ಮತ್ತು 15ರಂದು ಮಗ್ರಿಬ್ ನಮಾಝಿನ ಬಳಿಕ ನಡೆಯಲಿದೆ.

ಜ.13ರಂದು ಅಸ್ಸಯ್ಯದ್ ಹಾಶಿಂ ಬಾಅಲವಿ ತಂಙಳ್ ಕೊರಿಂಗಿಲ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಹುಸೈನ್ ಸಅದಿ ಕೆ.ಸಿ.ರೋಡ್ ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ. ಜ. 14ರಂದು ಅಬ್ದುಲ್ ಜಲೀಲ್ ಸಖಾಫಿ ಕರ್ನೂರು ಅವರಿಂದ ಧಾರ್ಮಿಕ ಭಾಷಣ ನಡೆಯಲಿದೆ.

ಜ.15ರಂದು ಸ್ವಲಾತ್ ವಾರ್ಷಿಕದ ನೇತೃತ್ವವನ್ನು ಕೆ.ಎಸ್. ಮುಖ್ಯಾರ್ ತಂಙಳ್ ವಹಿಸಲಿದ್ದು, ಕಲಂದರ್ ಸಅದಿ ಮುದರ್ರಿಸ್ ರೆಂಜ ಅವರು ಮುಖ್ಯ ಪ್ರಭಾಷಣ ನಡೆಸಿಕೊಡಲಿದ್ದಾರೆ.

ಕಾರ್ಯಕ್ರಮದ ಕೊನೆಯಲ್ಲಿ ಮಾಜಿ ಅಧ್ಯಕ್ಷರಾದ ಮುಹಮ್ಮದ್ ಹಾಜಿ ಅಜ್ಜಿಕಲ್ಲು ಹಾಗೂ ಮಾಜಿ ಕಾರ್ಯದರ್ಶಿಯಾದ ಮೊಯ್ದು ಕುಂಞಿ ಹೊಳಕೆರೆ ಅವರಿಗೆ ಸನ್ಮಾನಿಸಲಾಗುವುದು.

ಕಾರ್ಯಕ್ರಮದಲ್ಲಿ ಹಲವು ಪಂಡಿತರು ಹಾಗೂ ಧಾರ್ಮಿಕ ಮುಖಂಡರು ಭಾಗವಹಿಸಲಿದ್ದಾರೆ ಎಂದು ಫಾರೂಖ್ ಜುಮಾ ಮಸೀದಿ ಹಯಾತ್ ನಗರ, ರೆಂಜದ ಆಡಳಿತ ಸಮಿತಿ ಪ್ರಕಟನೆಯಲ್ಲಿ ತಿಳಿಸಿದೆ.

Leave a Reply

Your email address will not be published. Required fields are marked *

Join WhatsApp Group
error: Content is protected !!